ಕರಾವಳಿ

ಆಸ್ಟ್ರೊ ಮೋಹನ್ ಅವರಿಗೆ ಫೋಟೋಗ್ರಫಿ ಸೊಸೈಟಿ ಆಫ್ ಅಮೆರಿಕಾದ ಸ್ವರ್ಣ ಪದಕ

Pinterest LinkedIn Tumblr

ಉಡುಪಿ: ಡಾಕಾ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಉದಯವಾಣಿಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೊ ಮೋಹನ್ ಅವರಿಗೆ ಫೋಟೋಗ್ರಫಿ ಸೊಸೈಟಿ ಆಫ್ ಅಮೆರಿಕಾದ ಪ್ರತಿಷ್ಠಿತ ಸ್ವರ್ಣ ಪದಕ ಪ್ರಾಪ್ತವಾಗಿದೆ.

ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ತಂಗಿರುವ ಮೀನುಗಾರಿಕಾ ದೋಣಿಗಳ ವಿಹಂಗಮಯ ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ. ಇದೇ ಸರಣಿಯಲ್ಲಿ ಕರಾವಳಿ ಕಂಬಳವನ್ನು ಪ್ರತಿನಿಧಿಸುವ ಚಿತ್ರ ಸ್ವೀಕೃತಿಯಾಗಿದೆ.

ಹಲವು ವರ್ಷದಿಂದ ಉದಯವಾಣಿಯಲ್ಲಿ ಪತ್ರಿಕಾ ಛಾಯಾಗ್ರಾಹಕರಾಗಿರುವ ಆಸ್ಟ್ರೋ ಅವರು ಈ ಹಿಂದೆಯೂ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

Comments are closed.