ಕರಾವಳಿ

ಬೈಂದೂರು ಸಮೀಪದ ಬಡಾಕೆರೆಯಲ್ಲಿ ರೈಲು ಡಿಕ್ಕಿಯಾಗಿ ‘ಕರಿ ಚಿರತೆ’ ಸಾವು

Pinterest LinkedIn Tumblr

ಕುಂದಾಪುರ: ರೈಲು ಡಿಕ್ಕಿ ಹೊಡೆದ ಪರಿಣಾಮ ಕರಿ ಚಿರತೆ ಮೃತಪಟ್ಟ ಘಟನೆ ಸೋಮವಾರ ನಸುಕಿನ ವೇಳೆ ಬೈಂದೂರು ತಾಲೂಕಿನ ಬಡಾಕೆರೆ ರೈಲ್ವೇ ಮೇಲ್ಸೇತುವೆಯಲ್ಲಿ ನಡೆದಿದೆ.

3-4 ವರ್ಷ ಪ್ರಾಯದ ಗಂಡು ಕರಿ ಚಿರತೆ ಇದಾಗಿದ್ದು ಆಹಾರ ಅರಸಿ ನಾಡಿಗೆ ಬಂದಿದ್ದು ರೈಲು ರಸ್ತೆ ದಾಟುವಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಸ್ಥಳೀಯರು ರೈಲ್ವೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಅವರು ಅರಣ್ಯಾಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದು ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಚಿರತೆ ಮೃತದೇಹ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿದ್ದರು‌.

ಇನ್ನು ಈ ಭಾಗದಲ್ಲಿ ಅರಣ್ಯ ಪ್ರದೇಶ ಹಾಗೂ ಗೇರು ಪ್ಲಾಂಟೇಷನ್ ಇದ್ದು ಚಿರತೆ ಕಾಡಿನಿಂದ ಆಹಾರ ಅರಸಿ ಬಂದಿದೆ ಎನ್ನಲಾಗಿದೆ. ಕರಿಚಿರತೆ ಅಪರೂಪದ ವನ್ಯ ಜೀವಿಯಾಗಿದೆ.

ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಸ್ಥಳೀಯರಾದ ರಾಮ, ನಾಗರಾಜ್, ಸಂತೋಷ್, ಗುರುಪ್ರಸಾದ್, ಹರೀಶ್, ಮಂಜುನಾಥ್ ಅವರು ಈ ಸಂದರ್ಭದಲ್ಲಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.