ಉಡುಪಿ: ಶಿರಿಯಾರ ಗುಡ್ಡಟ್ಟು ಬಳಿ ಮಂಗಳವಾರ ಮಕ್ಕಳ ಅಪಹರಿಸಲು ಯತ್ನಿಸುತ್ತಿದ್ದಾರೆ ಎಂಬ ಗುಮಾನಿಯಲ್ಲಿ ಅಪರಿಚಿತ ಮೂವರು ಯುವಕರ ಸ್ಥಳೀಯ ಯುವಕರು ಹಿಡಿಯಲು ಪ್ರಯತ್ನಿಸಿದ್ದು, ಅಪರಿಚಿತ ಯುವಕರು ಹಿಡಿಯಲು ಬಂದವರಿಗೆ ಚೆಳ್ಳೆಹಣ್ಣು ತಿನ್ನಿಸಿ, ಪರಾರಿಯಾಗಿ ಜಪ್ತಿ ಬಳಿ ಪೊಲೀಸರು ಸಾರ್ವಜನಿಕರ ಸಹಕಾರದಲ್ಲಿ ಇಬ್ಬರ ಬಂಧಿಸಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ.


ಬೆಂಗಳೂರು ಮೂಲದ ಸುರೇಶ್ ಮತ್ತು ರಾಕೇಶ್ ಎಂಬವರು ಬಂಧಿತರು. ನಂದೀಶ ಯಾನೆ ವಿಶ್ವ ಪರಾರಿಯಾದ ವ್ಯಕ್ತಿ. ಶಿರಿಯಾರ ಗುಡ್ಡಟ್ಟು ಬಳಿ ಚಂದ್ರ ಶಿರಿಯಾರ ಎಂಬವರ 6 ವರ್ಷದ ಪುತ್ರ ಕಿಡ್ನಾಪ್ ಮಾಡುತ್ತಿರುವುದು ಸಾರ್ವಜನಿಕರು ನೋಡಿದ್ದು, ಮಗುವಿನ ರಕ್ಷಣೆಗೆ ದಾವಿಸಿದಾಗ ದುಷ್ಕರ್ಮಿಗಳು ಚಾಕು ತೋರಿಸಿ ಬೆದರಿಸಿದ್ದಾರೆ. ಅಷ್ಟರಲ್ಲಿ ಮತ್ತಷ್ಟು ಸಾರ್ವಜನಿಕರು ಸೇರಿದ್ದರಿಂದ ದುಷ್ಕರ್ಮಿಗಳು ಬೈಕಿನಲ್ಲಿ ಮಗುಬಿಟ್ಟು ಪರಾರಿಯಾಗಿದ್ದಾರೆ.
ಬೈಕಿನಲ್ಲಿ ಪರಾರಿಯಾಗುತ್ತಿರುವ ದುಷ್ಕರ್ಮಿಗಳ ಸಾರ್ವಜನಿಕರು ಆಟೋದಲ್ಲಿ ಬೆನ್ನುಹತಿದ್ದು, ಅಷ್ಟರಲ್ಲಿ ಕುಂದಾಪುರ ಗ್ರಾಮಾಂತರ ಠಾಣೆ ಎಸ್ಸೈ ರಾಜಕುಮಾರ್ ಅವರಿಗೆ ಸಾರ್ವಜನಿಕರು ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಗ್ರಾಮಾಂತರ ಠಾಣೆ ಎಸ್ಸೈ ಹಾಗೂ ಪೊಲೀಸರು ರೌಂಡ್‌ನಲ್ಲಿದ್ದು ಅವರೂ ಬೈಕ್ ಬೆನ್ನುಹತ್ತಿದ್ದು, ಜಪ್ತಿ ಹತ್ತಿರ ಬೈಕ್ ಛೇಸ್ ಮಾಡಿ ದುಷ್ಕರ್ಮಿಗಳ ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆ ಕೋಟ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಕೋಟ ಠಾಣೆಗೆ ಯಾರೂ ದೂರು ನೀಡದೆ ಇದ್ದಿದ್ದರಿಂದ ದೂರು ದಾಖಲಾಗಿಲ್ಲ. ಆಪಾದಿತರು ಬೈಕ್ ಊರ್ವ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿದ್ದರಿಂದ ಗ್ರಾಮಾಂತರ ಠಾಣೆ ಎಸ್ಸೈ ರಾಜಕುಮಾರ್ ಮಾಹಿತಿ ನೀಡಿದ್ದು, ಉರ್ವಾ ಠಾಣೆಗೆ ಆಪಾದಿತರ ಹಸ್ತಾಂತರಿಸಲಾಗುತ್ತದೆ.
Comments are closed.