ಕರಾವಳಿ

ಮೂರು ವರ್ಷದ ಮಗಳೊಂದಿಗೆ ಉಡುಪಿಯಿಂದ ನಾಪತ್ತೆಯಾದ ತಾಯಿ

Pinterest LinkedIn Tumblr

ಉಡುಪಿ: ತಾಯಿ ಹಾಗೂ ಮಗು ನಾಪತ್ತೆಯಾಗಿರುವ ಘಟನೆ ತಾಲೂಕಿನ ಪುತ್ತೂರು ಗ್ರಾಮದ ನಿಟ್ಟೂರು ಬಾಳಿಗಾ ಫಿಶ್ ನೆಟ್ ಕಂಪೌಂಡ್ ಬಳಿ ನಡೆದಿದೆ.

ಇಲ್ಲಿನ ನಿವಾಸಿ ಲಕ್ಷ್ಮೀ(28) ಎಂಬ ಮಹಿಳೆಯು ತನ್ನ 3 ವರ್ಷದ ಮಗಳಾದ ಸಿಂಧು ಜೊತೆಗೆ ಜನವರಿ 18 ರಿಂದ ಕಾಣೆಯಾಗಿದ್ದಾರೆ‌.

ಕಾಣೆಯಾದ ಮಹಿಳೆಯು 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ಕನ್ನಡ ಭಾಷೆ ಬಲ್ಲವರಾಗಿದ್ದು, ಇವರ ಬಗ್ಗೆ ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.