ಕರಾವಳಿ

ಉಡುಪಿಯ ಹೆಬ್ರಿಯಲ್ಲಿ ಡೆತ್ ನೋಟ್ ಬರೆದಿಟ್ಟು ಪ್ರೊಫೇಸರ್ ಆತ್ಮಹತ್ಯೆ

Pinterest LinkedIn Tumblr

ಉಡುಪಿ: ಹೆಬ್ರಿಯ ಖಾಸಗಿ ಕಾಲೇಜಿನ ಉಪನ್ಯಾಸಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜನವರಿ 1 ರ ಶುಕ್ರವಾರದಂದು ನಡೆದಿದೆ. ಬಾದಗುದ್ದೆಯ ಹೆಬ್ರಿ ಬಳಿಯ ಬಾಡಿಗೆ ಮನೆಯಲ್ಲಿ ತಂಗಿದ್ದ ವೆಂಕಟೇಶ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಅವರ ಮೃತದೇಹ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

(ಸಾಂದರ್ಭಿಕ ಚಿತ್ರ)

ರೋಣ ಮೂಲದ ವೆಂಕಟೇಶ್ ಶಿರ್ಸಿಯ ಹುಡುಗಿಯೊಬ್ಬಳನ್ನು ಪ್ರೀತಿಸಿ ಐದು ವರ್ಷಗಳ ಹಿಂದೆ ಮದುವೆಯಾಗಿದ್ದರು. ಶುಕ್ರವಾರ ಕಾಲೇಜಿಗೆ ತೆರಳಿದ್ದ ವೆಂಕಟೇಶ್ ನಂತರ ಅವರ ಮನೆಗೆ ಮರಳಿದ್ದಾರೆ. ಅಲ್ಲದೆ ಹೆಬ್ರಿಯ ಖಾಸಗಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದ ಅವರ ಪತ್ನಿಯನ್ನು ಕೂಡ ತಕ್ಷಣ ಮನೆಗೆ ಬರುವಂತೆ ಮೆಸ್ಸೆಜ್ ಕಳಿಸಿದ್ದು ಆ ಸಂದೇಶ ಕಂಡು ಮನೆಗೆ ಪತ್ನಿ ಮರಳಿದ್ದು ಅಷ್ಟರಲ್ಲಾಗಲೇ ವೆಂಕಟೇಶ್ ಆತ್ಮಹತ್ಯೆ ಮಾಡಿಕೊಂಡಿದ್ದರು.

ವೆಂಕಟೇಶ್ ಅವರು ಮೂಡುಬಿದಿರೆಯ ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ಕೊರೋನಾ ಲಾಕ್‌ಡೌನ್ ಹಿನ್ನೆಲೆ ಕೆಲಸ ಕಳೆದುಕೊಂಡಿದ್ದರು. ಇನ್ನು ವೆಂಕಟೇಶ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿಟ್ಟಿದ್ದರೆನ್ನಲಾದ ಡೆತ್ ನೋಟ್ ಸ್ಥಳದಲ್ಲಿ ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಹೆಬ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Comments are closed.