ಕರಾವಳಿ

ಉಡುಪಿ ಜಿಲ್ಲೆಯಲ್ಲಿ ಶಾಂತಿಯುತ ಗ್ರಾ.ಪಂ ಚುನಾವಣೆ: 74.06% ಮತದಾನ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ನಾಲ್ಕು ತಾಲೂಕುಗಳಾದ ಬ್ರಹ್ಮಾವರ, ಬೈಂದೂರು, ಉಡುಪಿ ಹಾಗೂ ಹೆಬ್ರಿ ತಾಲೂಕಿನ 66 ಗ್ರಾಮ ಪಂಚಾಯತ್ ಗಳಿಗೆ ನಡೆದ ಚುನಾವಣೆ ಶಾಂತಿಯುತವಾಗಿ ನಡೆದಿದ್ದು ಜಿಲ್ಲೆಯಲ್ಲಿ ಶೇ 74.06 ಮತದಾನ ನಡೆದಿದೆ.

ಉಡುಪಿ ತಾಲೂಕಿನ 16 ಗ್ರಾಮ ಪಂಚಾಯತ್ ಗಳ ಒಟ್ಟು 161 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು ಶೇ. 74.80 ಮತದಾನ ದಾಖಲಾಗಿದ್ದರೆ, ಹೆಬ್ರಿ ತಾಲೂಕಿನ 9 ಗ್ರಾಮ ಪಂಚಾಯತ್ ಗಳ 62 ಮತಗಟ್ಟೆಗಳಲ್ಲಿ ಶೇ 79.41 ಮತದಾನ ನಡೆದಿದೆ. ಬ್ರಹ್ಮಾವರ ತಾಲೂಕಿನ 15 ಗ್ರಾಮ ಪಂಚಾಯತ್ ಗಳ 209 ಮತಗಟ್ಟೆಗಳಲ್ಲಿ ಶೇ 71.28 ಮತದಾನ ದಾಖಲಾಗಿದೆ. ಬೈಂದೂರು ತಾಲೂಕಿನ 15 ಗ್ರಾಮ ಪಂಚಾಯತ್ ಗಳ 128 ಮತಗಟ್ಟೆಗಳಲ್ಲಿ ಶೇ. 71.28 ಮತದಾನ ನಡೆದಿದೆ.

Comments are closed.