ಕರಾವಳಿ

ಮಣಿಪಾಲದಲ್ಲಿ ಮರಗಳ ಮಾರಣಹೋಮಕ್ಕೆ ಖಂಡನೆ; ಕಾನೂನು ಕ್ರಮಕ್ಕೆ ಆಗ್ರಹ

Pinterest LinkedIn Tumblr

ಉಡುಪಿ: ಸುಡುಬಿಸಿಲ ಧಗೆಯ ವಾತಾವರಣದಲ್ಲಿ ಚಾಮರ ಬಿಸುತ್ತ ತಂಗಾಳಿಯನ್ನು ಪಸರಿಸುತ್ತಿದ್ದ, ಹತ್ತಕ್ಕೂ ಅಧಿಕ ಮರಗಳನ್ನು ಕಡಿದುರುಳಿಸುವ ಅಮಾನವಿಯ ಕೃತ್ಯ ಮಣಿಪಾಲ- ಹುಡ್ಕೊ ಕಾಲೋನಿ ಇಲ್ಲಿಯ, ಉಡುಪಿ ಸಮೂಹ ಶಿಕ್ಷಣ ಸಂಸ್ಥೆಗಳ ಸನಿಹ ಇರುವ, ಸರಕಾರಿ ಸ್ಥಳದಲ್ಲಿ ನಡೆದಿದೆ.

(ಸಾಂದರ್ಭಿಕ ಚಿತ್ರ)

ವೃಕ್ಷಗಳ ಹತ್ಯೆಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ಹಾಗೂ ಪರಿಸರಪ್ರೇಮಿ ಗುರುರಾಜ್ ಆಚಾರ್ಯ ಅವರು ತಿವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ, ಅರಣ್ಯ ಇಲಾಖೆ, ಪರಿಸರದ ನಾಶ ಮಾಡಿರುವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಇನ್ನು ಉಳಿದಿರುವ ಮರಗಳ ಕಟಾವಿಗೆ ತಡೆಯೊಡ್ಡಬೇಕೆಂದು ವಿನಂತಿಸಿಕೊಂಡಿದ್ದಾರೆ.

ಉದ್ಯಾನವನದ ನಿರ್ಮಾಣ ಕಾಮಗಾರಿ ನಡೆಸಲು ಮರಗಳ ಹತ್ಯೆ ನಡೆದಿರುವುದೆಂದು ತಿಳಿದು ಬಂದಿದೆ. ಸ್ಥಳಿಯರು ಗಿಡಗಳನ್ನು ನೆಟ್ಟು, ನೀರುಣಿಸಿ ಬೆಳೆಸಿದ ಮರಗಳು ಅವಾಗಿದ್ದವು. ಪರಿಸರ ರಕ್ಷಿಸಿ ಎನ್ನುವ ಜಾಗ್ರತಿಯ ಕೂಗೂ ಕೇಳಿಬರುತ್ತಿರುವ ಈ ಸಮಯದಲ್ಲಿ, ಮರಗಳು ಹತ್ಯೆಗೊಳಗಾದರೂ ಆಡಳಿತ ವ್ಯವಸ್ಥೆಗಳು ಮೌನವಾಗಿರುವುದು ವಿಪರ್ಯಾಸದ ಸಂಗತಿ ಎಂದು , ಅಭಿಪ್ರಾಯಗಳು ಸ್ಥಳಿಯ ಪರಿಸರ ಪ್ರೇಮಿಗಳಿಂದ ವ್ಯಕ್ತಗೊಂಡಿವೆ.

Comments are closed.