ಕರಾವಳಿ

ಪಾರ್ಕಿಂಗ್ ಸಮಸ್ಯೆ ಮುಕ್ತಿಗೆ ಒತ್ತಾಯ: ಕುಂದಾಪುರ ಪುರಸಭೆ ಸಾಮಾನ್ಯ ಸಭೆಯಲ್ಲಿ ಬಿಸಿಬಿಸಿ ಚರ್ಚೆ

Pinterest LinkedIn Tumblr

ಕುಂದಾಪುರ: ಪೆರ್ರಿ ಉದ್ಯಾನ ಅಕ್ರಮ ಕೂಡದ ಅಡ್ಡ ಆಗುತ್ತಿದೆ. ವಾಹನ್ ಪಾರ್ಕಿಂಗ್ ಸಮಸ್ಯೆ ಪರಿಹಾರ ಎಂದು? ಅಕ್ರಮ ವಿದ್ಯುತ್ ಸಂಪರ್ಕ ಸಕ್ರಮಕ್ಕೆ ಒಂದು ವಾರದ ಗಡುವು, ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕೆ ಪ್ರಾಧಿಕಾರ ಅಧಿಕಾರಿಗಳ ಕರೆಸಲು ಆಗ್ರಹ, ಯುಜಿಡಿ ಕಾಮಗಾರಿ ವಿಳಂಭದ ಕುರಿತು ಪಕ್ಷಬೇಧ ಮರೆತು ಪುರಸಭೆ ಸದಸ್ಯರು ಪ್ರಶ್ನಿಸಿದರು.

ಕುಂದಾಪುರ ಪುರಸಭೆ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಗುರುವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಉತ್ತಮ ಚರ್ಚೆ ನಡೆಯಿತು.

ಫುಟ್‌ಪಾತ್‌ಗಳು ಅಂಗಡಿ ಮುಂಗಟ್ಟಿಗಳ ನಾಮಫಲಕದ ಆಶ್ರಯ ತಾಣವಾಗುತ್ತಿದ್ದು, ವಾಹನ ಪಾರ್ಕಿಂಗ್ ಹಾಗೂ ಪಾದಾಚಾರಿ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ. ನಾಮಫಲಕ, ಪುಟ್‌ಫಾತ್ ಒತ್ತುವರಿ ತೆರವು ಮಾಡಿ, ಪಾರ್ಕಿಂಗ್, ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಅನಾವಶ್ಯಕವಾಗಿ ನಾವು ದಂಡ ಕಟ್ಟಬೇಕಾಗುತ್ತದೆ ಎಂದು ಗಿರೀಶ್ ಕುಂದಾಪುರ ಹೇಳಿದರು.ಸದಸ್ಯರಾದ ಸಂತೋಷ್ ಕುಮಾರ್ ಶೆಟ್ಟಿ, ಪ್ರಭಾಕರ, ಮೋಹನದಾಸ್ ಶೆಣೈ, ಶ್ರೀಧರ ಶೇರಿಗಾರ್, ದೇವಕಿ ಸಣ್ಣಯ್ಯ ಪಾರ್ಕಿಂಗ್ ಸಮಸ್ಯೆ ಬಗ್ಗೆ ಮಾತನಾಡಿದರು. ತಕ್ಷಣ ಪುರಸಭೆ ಪಾರ್ಕಿಂಗ್ ಸ್ಥಳದಲ್ಲಿನ ನಾಮಫಲಕ, ನೋಪಾರ್ಕಿಂಗ್ ಬೋರ್ಡ್ ತೆರವು ಮಾಡುವ ಕೆಲಸ ಮಾಡಲಿದೆ ಎಂದು ಮುಖ್ಯಾಧಿಕಾರಿ ಹೇಳಿದರು.

ಇನ್ನು ಯುಜಿಡಿ ಸಮಸ್ಯೆ ಬಗ್ಗೆ ಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯಿತು.

ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ್ ಖಾರ್ವಿ, ಮುಖ್ಯಾಧಿಖಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.

Comments are closed.