ಕರಾವಳಿ

ಗ್ರಾಮ ಪಂಚಾಯತ್ ಚುನಾವಣೆ- ಮತದಾರರು ಮತ್ತು ಮತಗಟ್ಟೆಗಳ ವಿವರ ಹೀಗಿದೆ..

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ ಡಿಸೆಂಬರ್ 22 ರಂದು ನಡೆಯುವ ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಉಡುಪಿ ತಾಲೂಕಿನ 16, ಬ್ರಹ್ಮಾವರ ತಾಲೂಕಿನ 27, ಬೈಂದೂರು ತಾಲೂಕಿನ 15, ಹೆಬ್ರಿ ತಾಲೂಕಿನ 9 ಸೇರಿದಂತೆ ಒಟ್ಟು 67 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ.

ಮತಗಟ್ಟೆಗಳ ವಿವರ: ಡಿಸೆಂಬರ್ 22 ರಂದು ಮೊದಲನೇ ಹಂತದಲ್ಲಿ , ಉಡುಪಿಯಲ್ಲಿ 124 ಸಾಮಾನ್ಯ, 28 ಸೂಕ್ಷ್ಮ , 9 ಅತೀ ಸೂಕ್ಷ್ಮ ಸೇರಿದಂತೆ ಒಟ್ಟು 161 ಮತಗಟ್ಟೆಗಳಿದ್ದು, ಹೆಬ್ರಿಯಲ್ಲಿ 62 ಮತಗಟ್ಟೆಗಳಿದ್ದು, ಬೈಂದೂರು ನಲ್ಲಿ 104 ಸಾಮಾನ್ಯ, 14 ಸೂಕ್ಷ್ಮ , 10 ಅತೀ ಸೂಕ್ಷ್ಮ ಸೇರಿದಂತೆ ಒಟ್ಟು 128 ಮತಗಟ್ಟೆಗಳಿದ್ದು, ಮತ್ತು ಬ್ರಹ್ಮಾವರದಲ್ಲಿ 158 ಸಾಮಾನ್ಯ, 47 ಸೂಕ್ಷ್ಮ , ಸೇರಿದಂತೆ ಒಟ್ಟು 205 ಮತಗಟ್ಟೆಗಳಿದ್ದು, ಜಿಲ್ಲೆಯಲ್ಲಿ ಪ್ರಥಮ ಹಂತದ ಚುನಾವಣೆಯಲ್ಲಿ 448 ಸಾಮಾನ್ಯ, 89 ಸೂಕ್ಷ್ಮ , 19 ಅತೀ ಸೂಕ್ಷ್ಮ ಸೇರಿದಂತೆ ಒಟ್ಟು 556 ಮತಗಟ್ಟೆಗಳಿವೆ.

ಮೊದಲನೇ ಹಂತದ ಚುನಾವಣೆಗೆ, ಉಡುಪಿಯಲ್ಲಿ 16 ಚುನಾವಣಾಧಿಕಾರಿಗಳು ಮತ್ತು 20 ಸಹಾಯಕ ಚುನಾವಣಾಧಿಕಾರಿಗಳು, ಬ್ರಹ್ಮಾವರದಲ್ಲಿ 27 ಚುನಾವಣಾಧಿಕಾರಿಗಳು ಮತ್ತು 27 ಸಹಾಯಕ ಚುನಾವಣಾಧಿಕಾರಿಗಳು, ಬೈಂದೂರು ನಲ್ಲಿ 16 ಚುನಾವಣಾಧಿಕಾರಿಗಳು ಮತ್ತು 17 ಸಹಾಯಕ ಚುನಾವಣಾಧಿಕಾರಿಗಳು, ಹೆಬ್ರಿಯಲ್ಲಿ 9 ಚುನಾವಣಾಧಿಕಾರಿಗಳು ಮತ್ತು 9 ಸಹಾಯಕ ಚುನಾವಣಾಧಿಕಾರಿಗಳು, ಸೇರಿದಂತೆ ಒಟ್ಟು 68 ಚುನಾವಣಾಧಿಕಾರಿಗಳನ್ನು, 73 ಸಹಾಯಕ ಚುನಾವಣಾಧಿಕಾರಿಗಳನ್ನು ಹಾಗೂ 4 ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

ಮತದಾರರ ವಿವರ: ಉಡುಪಿಯಲ್ಲಿ 53159 ಪುರುಷ ಮತ್ತು 57281 ಮಹಿಳಾ ಮತದಾರರು, ಬ್ರಹ್ಮಾವರದಲ್ಲಿ 66684 ಪುರುಷ , 71970 ಮಹಿಳಾ ಮತದಾರರು, ಬೈಂದೂರು ನಲ್ಲಿ 42910 ಪುರುಷ , 44822 ಮಹಿಳಾ ಮತದಾರರು, ಹೆಬ್ರಿಯಲ್ಲಿ 19654 ಪುರುಷ 20621 ಮಹಿಳಾ ಮತದಾರರು ಸೇರಿದಂತೆ ಒಟ್ಟು 182407 ಪುರುಷ, 194694 ಮಹಿಳಾ ಮತ್ತು 6 ಇತರೆ ಮತದಾರರು ಸೇರಿದಂತೆ ಒಟ್ಟು 377107 ಮಂದಿ ಮತದಾರರು ಮತ ಚಲಾಯಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.