ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ- ಮರುನಾಮಕರಣ ಬಗ್ಗೆ ಹೆಸರಿನ ಬಗ್ಗೆ ಹಲವಾರು ದಿನಗಳಿಂದ ವಿವಿಧ ಹೆಸರುಗಳು, ಸಂಘಟನೆ, ಮಠ ಮಾನ್ಯರ, ಜಾತಿ ಮತ ಧರ್ಮದವರ ಬೇಡಿಕೆ ಹೆಚ್ಚಾಗಿದ್ದು ಹೆಸರು ತಮ್ಮ ಬೇಡಿಕೆಯ ಪರವಾಗಿ ಪಡೆದುಕೊಳ್ಳಲು ಹೋರಾಟದ ಮಟ್ಟಕ್ಕೆ ಇಳಿದಿದೆ. ಪರ ವಿರೋಧಗಳ ನಡುವೆ “ನಮ್ಮ ತುಳುನಾಡ್ ಟ್ರಸ್ಟ್ ಮಂಗಳೂರು” ಈ ಎಲ್ಲಾ ಪರ ವಿರೋಧದ ನಡುವೆ ಯಾವುದೇ ದ್ವೇಷ, ಪ್ರತಿಭಟನೆಗಳ ಮಾರ್ಗವನ್ನು ತಪ್ಪಿಸಲು ಸರ್ವರಿಗೂ ಸರ್ವಧರ್ಮದವರು ಹಾಗೂ ಜಾತಿ ಮತ ಸಮುದಾಯದವರು ಒಪ್ಪಿ ಕೊಳ್ಳಬಹುದಾದ “ತುಳು ನಾಡ್” ಹೆಸರನ್ನು ಸೂಚಿಸಿ ಸಂಭಂದ ಪಟ್ಟ ಸರ್ಕಾರಿ ಇಲಾಖೆ ಹಾಗೂ ಜನ ಪ್ರತಿನಿಧಿಗಳಿಗೆ ಮನವಿಯನ್ನು ಸಲ್ಲಿಸಿದ್ದಾರೆ.
ಕರ್ನಾಟಕ ರಾಜ್ಯದ ಕಡಲ ತೀರದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನೆಲೆಸಿರುವ ವಿವಿಧ ಧರ್ಮಿಯರು ಮತ್ತು ಸಮುದಾಯದವರು ಪ್ರಾದೇಶಿಕವಾಗಿ ತುಳು ಭಾಷೆಯನ್ನು ತಮ್ಮ ತಮ್ಮ ಮನೆಗಳಲ್ಲಿ ಮತ್ತು ವ್ಯಾಪಾರ ವ್ಯವಹಾರ ಗಳಲ್ಲಿ ಸಾಮಾಜಿಕವಾಗಿ ದೈನಂದಿನ ಚಟುವಟಿಕೆಗಳಲ್ಲಿ ಆಡು ಭಾಷೆಯನ್ನಾಗಿ ಉಪಯೋಗಿಸಿಕೊಂಡು ಬರುತ್ತಿದ್ದಾರೆ.
ತುಳುನಾಡಿನ ಭಾಷೆ, ಕಲೆ ಸಂಸ್ಕೃತಿ, ಕ್ರೀಡೆ, ಭೂತಕೋಲ, ಯಕ್ಷಗಾನ, ಕಂಬಳ, ನಾಟಕ, ಚಲನಚಿತ್ರ ಹಾಗೂ ಊರಿನಲ್ಲಿ ನಡೆಯುವ ಜಾತ್ರೆ, ಹಬ್ಬ ಹರಿದಿನಗಳಲ್ಲಿ ತುಳು ನಾಡಿನ ಸಂಸ್ಕೃತಿ ವಿಶ್ವದ ಗಮನ ಸೆಳೆದಿದೆ. ವಿದೇಶದಿಂದ ಕರ್ನಾಟಕಕ್ಕೆ ಪ್ರವಾಸ ಮಾಡಲು ಬರುವ ವಿದೇಶಿ ಪ್ರವಾಸಿಗರು ತುಳುನಾಡಿನ ಸಂಸ್ಕೃತಿಯನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಹೆಚ್ಚು ಹೆಚ್ಚು ಆಕರ್ಷಣೀಯ ಪ್ರವಾಸಿ ತಾಣಗಳಿರುವ ಕಡಲ ತೀರದ ಮಂಗಳೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ.
ತುಳು ನಾಡಿನ ಘನತೆ ಗೌರವವನ್ನು ಕಾಪಾಡಿಕೊಂಡು ಬರುತ್ತಿರುವ ತುಳುವರ ಬಹು ದಿನದ ಬೇಡಿಕೆ “ತುಳುನಾಡು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು” ಎಂದು ಪುನರ್ ನಾಮಕರಣವಾಗ ಬೇಕೆಂದು ಆಗಿದೆ.
ತುಳುನಾಡಿನ ಪುರಾಣದಲ್ಲಿ ಬರುವ ಪರಶುರಾಮ, ತುಳು ನಾಡಿನಲ್ಲಿ ಹಲವಾರು ಪ್ರಸಿದ್ದ ಪುರುಷರು ಮತ್ತು ಮಹಿಳೆಯರು ಇದ್ದಾರೆ ತುಳು ನಾಡಿನ ಅರಸು ಭೂತಾಳ ಪಾಂಡ್ಯ ಪೋರ್ಚುಗ್ರಿಸರ ವಿರುದ್ಧ ಹೋರಾಡಿದ ವೀರ ರಾಣಿ ಅಬ್ಬಕ್ಕ, ಕಾರ್ಣಿಕದ ಪುರುಷರು ಕೋಟಿ ಚೆನ್ನಯ್ಯ, ಕಾಂತ ಬಾರೆ ಬೂದ ಬಾರೆ, ಅಗೊಳಿ ಮಂಜಣ್ಣ, ಅಬ್ಬಗ ದಾರಗ, ಕಲ್ಕುಡ, ಬ್ಯಾರಿ ಸಮುದಾಯದ ಬಪ್ಪ ಬ್ಯಾರಿ, ತುಳು ನಿಘಂಟನ್ನು ರಚಿಸಿರುವ ಕ್ರೈಸ್ತ ಸಮುದಾಯದ ಎ ಮ್ಯಾನರ್ ಹಾಗೂ ಮಂಗಳೂರು ವಿಮಾನ ನಿಲ್ದಾಣ ಸ್ಥಾಪನೆಯ ರುವಾರಿ ಶ್ರೀನಿವಾಸ ಮಲ್ಯ ಇತ್ಯಾದಿ ಹಲವಾರು ಪ್ರಸಿದ್ದ ಹೆಸರುಗಳು ಇದೆ. ಒಂದೊಂದು ಸಮುದಾಯದವರಿಗೆ ಅವರವರ ಪ್ರಸಿದ್ಧ ಪುರುಷರ ಮಹಿಳೆಯ ಹೆಸರುಗಳನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಮರು ನಾಮಕರಣ ಮಾಡುವ ಇಚ್ಚೆ ಇದೆ. ಇವುಗಳಲ್ಲಿ ಯಾವುದೇ ಒಂದು ಹೆಸರನ್ನು ನಾಮಕರಣ ಮಾಡಿದರೆ ಒಂದೊಂದು ಜಾತಿ, ಪಂಗಡ, ಸಮುದಾಯದವರು ತಮ್ಮ ವಿರೋಧವನ್ನು ಸಾಮೂಹಿಕವಾಗಿ ಮಾಡುತ್ತಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಾಮಾಜಿಕ, ಸಾಂಸ್ಕೃತಿಕ ಮತ್ತು ದಿನ ನಿತ್ಯದ ವ್ಯವಹಾರಗಳ ಆಡು ಭಾಷೆ ತುಳು ಭಾಷೆಯಾಗಿದೆ.
ಸರ್ವಧರ್ಮಿಯರು, ಸರ್ವ ಮತ ಸಮುದಾಯದವರು ಒಪ್ಪಿ ಕೊಳ್ಳುವ “ತುಳು” ಶಬ್ದ ಒಂದು ಸಂಸ್ಕೃತಿಯನ್ನು ಪ್ರತಿಬಿಂಭಿಸುತ್ತಿದೆ.
ಈ ಸುಸಂದರ್ಭದಲ್ಲಿ ತಾವು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ “ತುಳುನಾಡು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು” ಎಂದು ಮರು ನಾಮಕರಣ ಮಾಡುವುದು ಅತ್ಯಂತ ಸೂಕ್ತವಾಗಿದೆ.
ನಮ್ಮತುಳುನಾಡ್ ಟ್ರಸ್ಟ್ (ರಿ). ಮಂಗಳೂರು