ಕರಾವಳಿ

K.S.R.T.C ನಿಗಮದ ಪ್ರತಿಷ್ಠಿತ ಸಾರಿಗೆಗಳಲ್ಲಿ ಪ್ರಯಾಣದರ ಕಡಿಮೆ

Pinterest LinkedIn Tumblr

ಉಡುಪಿ: ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರಾರಸಾ.ನಿಗಮದ (ಕೆ.ಎಸ್.ಆರ್.ಟಿ.ಸಿ) ವತಿಯಿಂದ ಕರ್ಯಾರಚರಣೆಯಾಗುತ್ತಿರುವ ಪ್ರತಿಷ್ಠಿತ ಸಾರಿಗೆಗಳಾದ ರಾಜಹಂಸ, ವೋಲ್ವೋ, ನಾನ್ ಎಸಿ ಸ್ಲೀಪರ್, ಮಲ್ಟಿಆಕ್ಸ್ಲ್, ಡ್ರೀಮ್‌ಕ್ಲಾಸ್ ಸಾರಿಗೆಗಳಲ್ಲಿ ನವೆಂಬರ್ 22 ರಿಂದ ಅನ್ವಯವಾಗುವಂತೆ ಪ್ರಯಾಣ ದರದಲ್ಲಿ ಕಡಿಮೆ ಮಾಡಲಾಗಿದೆ.

(ಸಾಂದರ್ಭಿಕ ಚಿತ್ರ)

ಈ ಸಾರಿಗೆಗಳಿಗೆ ಆನ್‌ಲೈನ್ ಮುಂಗಡ ಟಿಕೇಟು ಬುಕ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದ್ದು, www.ksrtc.in, ಹತ್ತಿರದ ರಿಸರ್ವೇಶನ್ ಕೌಂಟರ್ ಸಂಪರ್ಕಿಸಬಹುದು. ಈ ಸಾರಿಗೆಗಳ ಸದುಪಯೋಗವನ್ನು ಸಾರ್ವಜನಿಕ ಪ್ರಯಾಣಿಕರು ಪಡೆದುಕೊಳ್ಳುವಂತೆ ಮಂಗಳೂರು ಕರಾರಸಾಸಂ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.