ಕರಾವಳಿ

15 ದಿನದಲ್ಲಿ ಉಡುಪಿ ಅಬಕಾರಿ ಅಧಿಕಾರಿಗಳಿಂದ ಅಕ್ರಮ ಮದ್ಯ, ಗಾಂಜಾ ದಾಳಿ ವಿವರ..!

Pinterest LinkedIn Tumblr

ಉಡುಪಿ : ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯು ಅಕ್ಟೋಬರ್ 1 ರಿಂದ 14 ರ ವರೆಗೆ ಅಬಕಾರಿ ಕಾಯ್ದೆ 1965 ರ ಕಲಂ 32 ರಡಿ4 ಪ್ರಕರಣ, ಎನ್‌ಡಿಪಿಎಸ್ 1985 ಕಾಯ್ದೆಯಡಿ 4 ಪ್ರಕರಣ ದಾಖಲಿಸಿ, 429 ಗ್ರಾಂ ಗಾಂಜಾ, 29.520 ಲೀ ಅಕ್ರಮ ಮದ್ಯ, 19.500 ಲೀಟರ್ ಗೋವಾ ಮದ್ಯ ಹಾಗೂ 5 ದ್ವಿಚಕ್ರ ವಾಹನಗಳನ್ನು ಜಫ್ತುಪಡಿಸಿ, ಪ್ರಕರಣಕ್ಕೆ ಸಂಬಂಧಿಸಿದ 4 ಜನ ಆರೋಪಿಗಳನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಲಾಗಿದೆ.

ವಶಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ 3 ಲಕ್ಷ ರೂ. ಗಳಾಗಿರುತ್ತದೆ ಎಂದು ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತರ ಪ್ರಕಟಣೆ ತಿಳಿಸಿದೆ.

Comments are closed.