ಉಡುಪಿ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಬಾರೀ ಮಳೆಯಿಂದಾಗಿ ಗುಡ್ಡ ಕುಸಿತಗೊಂಡು ಮಣಿಪಾಲದಲ್ಲಿ ಬಹು ಅಂತಸ್ತಿನ ಕಟ್ಟಡವೊಂದು ಅಪಾಯಕ್ಕೆ ಸಿಲುಕಿಕೊಂಡಿದೆ.

ಎಂಟು ಅಂತಸ್ಥಿನ ವಸತಿ ಸಮುಚ್ಚಯದಲ್ಲಿ ಸುಮಾರು 23 ಕುಟುಂಬಗಳು ವಾಸವಾಗಿವೆ. ಕಟ್ಟಡಕ್ಕೆ ಅಪಾಯವಿರುವ ಹಿನ್ನೆಲೆಯಲ್ಲಿ ಕುಟುಂಬಗಳ ಸ್ಥಳಾಂತರಕ್ಕೆ ಜಿಲ್ಲಾಡಳಿತ ಸೂಚನೆ ನೀಡಿದೆ. ಸೋಮವಾರ ಬೆಳಗ್ಗಿನಿಂದ ಭೂ ಕುಸಿತ ಆರಂಭಗೊಂಡಿದೆ. ಸ್ಥಳಕ್ಕೆ ನಗರ ಪಾಲಿಕೆ ಆಯುಕ್ತರಾದ ಆನಂದ್ ಕಲ್ಲೋಲಿಕರ್, ಎಂಜಿನಿಯರ್ ಮೋಹನ್ ರಾಜ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗೋಡೆಯಲ್ಲಿ ಬಿರುಕು ಉಂಟಾದಲ್ಲಿ ಅಪಾಯದ ಮುನ್ಸೂಚನೆಯಾಗಿದ್ದು, 24 ಮುಂಚಿತವಾಗಿ ಕಟ್ಟಡದಲ್ಲಿರುವವರನ್ನು ಸ್ಥಳಾಂತರ ಮಾಡಬೇಕಾಗುತ್ತದೆ. ಇಂದ್ರಾಳಿ ಜಂಕ್ಷನ್ ನಿಂದ ಮಣಿಪಾಲಕ್ಕೆ ಎರಡು ಕಿಲೋ ಮೀಟರ್ ಅಂತರವಿದ್ದು, ಈ ಹಿನ್ನೆಲೆಯಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Comments are closed.