ಕರಾವಳಿ

ಕೊಲ್ಲೂರಿನಲ್ಲಿ ಯಕ್ಷಗಾನ ಮೇಳ ಆರಂಭಿಸಲು ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಮನವಿ

Pinterest LinkedIn Tumblr

ಕುಂದಾಪುರ: ಮುಂದಿನ ನವೆಂಬರ್‌ ತಿಂಗಳಿಂದ ಯಕ್ಷಗಾನ ಪ್ರದರ್ಶನ ಮಾಡಲು ಸರ್ಕಾರ ಅನುಮತಿ ನೀಡಬೇಕು. ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಮೇಳಗಳ ಕಲಾವಿದರಿಗೆ ಪೂರ್ಣ ಪ್ರಮಾಣದ ಪರಿಹಾರ ಸಿಕ್ಕಿದೆ. ಆದರೆ ಖಾಸಗಿ ಮೇಳಗಳ ಕಲಾವಿದರಿಗೆ ಸರ್ಕಾರ ಹಾಗೂ ಯಜಮಾನರಿಂದ ಕೊಡಿಸಲು ಕ್ರಮ ಕೈಗೊಳ್ಳುವಂತೆ ಸಚಿವರಿಗೆ, ಹಿರಿಯ ಯಕ್ಷಗಾನ ಕಲಾವಿದ ಕೋಡಿ ವಿಶ್ವನಾಥ ಗಾಣಿಗ ಹಾಗೂ ಇತರ ಕಲಾವಿದರು ಎಲ್ಲಾ ಯಕ್ಷಗಾನ ಕಲಾವಿದರ ಪರವಾಗಿ ಕೊಲ್ಲೂರಿನಲ್ಲಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, ಕೊಲ್ಲೂರಿನಲ್ಲಿ ಪುನ: ಯಕ್ಷಗಾನ ಮೇಳವನ್ನು ಪ್ರಾರಂಭಿಸುವುದರಿಂದ ಕೊರೊನಾ ಕಾರಣದಿಂದ ಅತಂತ್ರರಾಗಿರುವ ಕಲಾವಿದರು ಬದುಕು ಕಟ್ಟಿಕೊಳ್ಳಬಹುದು ಎಂದು ಬೇಡಿಕೆ ಬಂದಿದ್ದು, ಇದರ ಸಾಧಕ–ಬಾಧಕ ಕುರಿತು ಚರ್ಚಿಸಿ ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

 

Comments are closed.