ಕುಂದಾಪುರ: ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ ಇಬ್ಬರನ್ನು ಪೋಲಿಸರು ವಶಕ್ಕೆ ಪಡೆದ ಘಟನೆ ಬುಧವಾರ ಕುಂದಾಪುರದ ಕುಂಭಾಸಿ ಸಮೀಪದ ಗೋಪಾಡಿ ರಸ್ತೆಯಲ್ಲಿ ನಡೆದಿದೆ. ಮಣೂರು ಪಡುಕೆರೆ ನಿವಾಸಿ ರಾಮ ಪೂಜಾರಿ(40) ಹಾಗೂ ಬ್ರಹ್ಮಾವರ ನಿವಾಸಿ ಸುಬ್ರಹ್ಮಣ್ಯ (30) ಬಂಧಿತ ಆರೋಪಿಗಳು.

ಖಚಿತ ಮಾಹಿತಿ ಆಧರಿಸಿ ಕುಂದಾಪುರ ಆಹಾರ ನೀರಿಕ್ಷಕ ಎಚ್.ಎಸ್ ಸುರೇಶ್ ಹಾಗೂ ಕುಂದಾಪುರ ಠಾಣಾಧಿಕಾರಿ ಸದಾಶಿವ ಗವರೋಜಿ ಮತ್ತು ಸಿಬ್ಬಂದಿಗಳು ಗೋಪಾಡಿ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸಿದ್ದು ಮಾರುತಿ ಸುಜುಕಿ ಟರ್ಬೋ ಗೂಡ್ಸ್ ವಾಹನದಲ್ಲಿ ಅಕ್ಕಿ ಸಾಗಿಸುತ್ತಿದ್ದವರನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ವಿಚಾರಣೆ ವೇಳೆ ಪಡಿತರ ಅಕ್ಕಿಯನ್ನು ಜನರಿಂದ ಖರೀದಿಸಿ ಹೆಚ್ಚಿನ ಬೆಲೆಗೆ ಹೋಟೆಲ್ ಗಳಿಗೆ ಮಾರಾಟ ಮಾಡುತ್ತಿದ್ದೇವು ಎಂದು ತಿಳಿಸಿದ್ದಾರೆ.
ಆರೋಪಿಗಳಿಂದ ಒಟ್ಟು 4 ಲಕ್ಷ ರೂ. ಮೌಲ್ಯದ ಮಾರುತಿ ಸುಜುಕಿ ಟರ್ಬೋ ವಾಹನ, 22,500 ರೂ. ಮೌಲ್ಯದ 15 ಕಿಂಟ್ವಾಲ್ ಅಕ್ಕಿ, 5500 ರೂ ನಗದು ಹಾಗೂ 2 ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.