ಕರಾವಳಿ

ಬಿಲ್ಲವರ ಎಸೋಸಿಯೇಷನ್ ಮಲಾಡ್ ಕಚೇರಿಯಲ್ಲಿ ಗುರುನಾರಾಯಣ ಜಯಂತಿ ಆಚರಣೆ

Pinterest LinkedIn Tumblr

ಮುಂಬೈ : ಮುಂಬೈ ನಗರದ ಪ್ರತಿಷ್ಠಿತ ಜಾತಿಯ ಸಂಸ್ಥೆಯಲ್ಲಿ ಒಂದಾಗಿರುವ ಬಿಲ್ಲವರ ಎಸೋಸಿಯೇಶನ್ ಮಲಾಡ್ ಸ್ಥಳೀಯ ಕಚೇರಿಯ ಕಾರ್ಯಾಲಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 166ನೇ ಜನ್ಮ ದಿನಾಚರಣೆಯನ್ನು ಸೆಪ್ಟಂಬರ್ 2ರಂದು ಆಚರಿಸಲಾಯಿತು.

ಬೆಳಿಗ್ಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ನಾಮ ನಾಮಸ್ಮರಣೆ ಬಳಿಕ. ಭಜನೆ .ಆರತಿ ನಡೆಯಿತು
ಪೂಜಾ ಕಾರ್ಯಗಳನ್ನು ಜಯ ಪೂಜಾರಿ ಅವರು ನಡೆಸಿದರೆ ಮಹಾಬಲ ಪೂಜಾರಿ ಸುಂದರ್ ಪೂಜಾರಿ. ರಾಮ ಪೂಜಾರಿ . ಅನಿಲ್ ಪೂಜಾರಿ. ದಿನೇಶ್ ಪೂಜಾರಿ. ಗೋಪಾಲ್ ಪೂಜಾರಿ ಸಹಕರಿಸಿದರು.

ಸ್ಥಳೀಯ ಕಚೇರಿಯ ಕಾರ್ಯಧ್ಯಕ್ಷ ಸಂತೋಷ್ ಕೆ ಪೂಜಾರಿ ಉಪಸ್ಥಿತಿಯಲ್ಲಿ ಸರಕಾರದ ನಿಯಮದಂತೆ ಸರಳವಾಗಿ ಪೂಜೆಯನ್ನು ಆಯೋಜಿಸಲಾಯಿತು.

ಭಜನೆಯಲ್ಲಿ ಆರ್ ಬಿ ಕರ್ಕೇರ .ಶೀಲಾ ಮಹಾಬಲ ಪೂಜಾರಿ. ಯಶೋದ ಸುಂದರ್ ಪೂಜಾರಿ .ಜಗನ್ನಾಥ್ ಮೆಂಡನ್ ಸಾಲಿಗ್ರಾಮ. ಪೂಜೆಯಲ್ಲಿ ಬಿಲ್ಲವರ ಎಸೋಸಿಯೇಷನ್ ಉಪಾಧ್ಯಕ್ಷ ಶಂಕರ್ ಡಿ ಪೂಜಾರಿ .ಭಾರತ್ ಬ್ಯಾಂಕಿನ ನಿರ್ದೇಶಕ ಗಂಗಾಧರ್ ಜೆ ಪೂಜಾರಿ ಮತ್ತು ಅಕ್ಷಯ ಪತ್ರಿಕೆಯ ಸಂಪಾದಕ ಮಂಡಳಿಯ ಹರೀಶ್ ಪೂಜಾರಿ ಕೊಕ್ಕರಣೆ. ವಿಶ್ವನಾಥ್ ಪೂಜಾರಿ ಮತ್ತಿತರರು ಉಪಸ್ಥರಿದ್ದರು.

_ದಿನೇಶ್ ಕುಲಾಲ್, ಮುಂಬಾಯಿ

Comments are closed.