ಕರಾವಳಿ

ಮುಂಬೈ ಬಂಟರ ಭವನದಲ್ಲಿ ಸಂಭ್ರಮದ ಗಣೇಶೋತ್ಸವ

Pinterest LinkedIn Tumblr

ಮುಂಬೈ: ಮುಂಬೈ ಮಹಾ ನಗರದ ಪ್ರತಿಷ್ಠಿತ ಸಂಸ್ಥೆ ಬಂಟರ ಸಂಘ ಮುಂಬಯಿ . ಬಂಟರ ಭವನದ ಆವರಣದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ, 15ನೇ ವರ್ಷದ ಗಣೇಶೋತ್ಸವ 22ರಂದು ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯಂದು, ಬೆಳಿಗ್ಗೆ 10.35ರ ಶುಭಲಗ್ನದಲ್ಲಿ *ಶ್ರೀ ವಿಶ್ವಂಭರ ಗಣಪತಿಯ ಪ್ರತಿಷ್ಟಾಪನೆಯನ್ನು ಸಕಲ ಪೂಜಾವಿಧಿ ವಿಧಾನಗಳೊಂದಿಗೆ ನಡೆಸಲಾಯಿತು.

ಸಂಘದ ಅಧ್ಯಕ್ಷರಾದ ಪದ್ಮನಾಭ ಎಸ್ ಪಯ್ಯಡೆಯವರ ಹಾಗೂ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ, ವಿದ್ವಾನ್ ಅರವಿಂದ ಬನ್ನಿಂತಾಯರ ಪೌರೋಹಿತ್ಯದಲ್ಲಿ ಸಂಘದ ಜ್ಞಾನ ಮಂದಿರ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರನಾಥ್ ಭಂಡಾರಿ ದಂಪತಿಗಳ ಯಜಮಾನಿಕೆಯಲ್ಲಿ ವಿವಿಧ ಪೂಜಾ ಕಾರ್ಯಗಳು ನಡೆಯಿತು.

ಬೆಳಿಗ್ಗೆ ಪ್ರತಿಷ್ಠಾಪನೆ- ಗಣಹೋಮ ಸಂಜೆ ವಿಸರ್ಜನಾ ಪೂಜೆ ಶ್ರೀ ಮಹಾಗಣಪತಿ ವಿಗ್ರಹ ವಿಸರ್ಜನೆ ಸರಕಾರದ ಕಾನೂನಾತ್ಮಕ ನಿಬಂಧನೆಗನುಸಾರವಾಗಿಈ ವರ್ಷ ಒಂದೇ ದಿನದ ಶ್ರೀ ಗಣಪತಿ ಉತ್ಸವ ಸರಳ ರೀತಿಯಿಂದ ಆಚರಿಸಲಾಯಿತು.

ದಿನಪೂರ್ತಿ ನಡೆದ ಕಾರ್ಯಕ್ರಮದಲ್ಲಿ ಬಂಟರ ಸಂಘದ ಪದಾಧಿಕಾರಿಗಳು ಮಹಿಳಾ ವಿಭಾಗದ ಪದಾಧಿಕಾರಿಗಳು ವಿಭಾಗದ ಪದಾಧಿಕಾರಿಗಳು ವಿವಿಧ ಉಪಸಮಿತಿಗಳ ಪದಾಧಿಕಾರಿಗಳು ಮತ್ತು ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

 

ವರದಿ : ದಿನೇಶ್ ಕುಲಾಲ್, ಮುಂಬೈ.

Comments are closed.