ಕರಾವಳಿ

6ನೇ ತರಗತಿ ಸಮಾಜಶಾಸ್ತ್ರ ಪಠ್ಯದ ನಿರ್ದಿಷ್ಟ ಪಾಠ ಕೈಬಿಡಲು ಶಿಕ್ಷಣ ಸಚಿವರ ಆದೇಶ

Pinterest LinkedIn Tumblr

ಉಡುಪಿ: ಆರನೆಯ ತರಗತಿ ಸಮಾಜಶಾಸ್ತ್ರದ ಪಠ್ಯಪುಸ್ತಕದಲ್ಲಿದ್ದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದ್ದ ಪಾಠವನ್ನು ಮುಂದಿನ ವರ್ಷ ಕೈಬಿಡುವುದಾಗಿ ಮತ್ತು ಈ ವರ್ಷ ಆ ನಿರ್ದಿಷ್ಟ ಪಾಠವನ್ನು ಮಾಡದಂತೆ ಸೂಚನೆ ನೀಡುವುದಾಗಿ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ಪಾಠದ ವಿಷಯವನ್ನು ಅರಿತ ಉಡುಪಿ ಅದಮಾರು ಮಠ ಶಿಕ್ಷಣ ಮಂಡಳಿ ಉಪಾಧ್ಯಕ್ಷ ಶ್ರೀಕೃಷ್ಣಮಠ ಪರ್ಯಾಯ ಶ್ರೀಗಳಾದ ಈಶಪ್ರಿಯ ತೀರ್ಥ ಶ್ರೀಪಾದರು ಆಡಿಯೋ ಸಂದೇಶ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದನ್ನು ಆಲಿಸಿದ ಸಚಿವ ಸುರೇಶ್‌ ಕುಮಾರ್‌ ಅವರು ಸದ್ಯ ಆ ಪಾಠವನ್ನು ಮಾಡದಂತೆ ತಿಳಿಸಿದ್ದೇನೆ ಎಂದು ತಿಳಿಸಿದ್ದಾರೆ.

ಭಾವನೆಗೆ ಧಕ್ಕೆ ತರುತ್ತದೆ ಎನ್ನಲಾದ ನಿರ್ದಿಷ್ಟ ಪಾಠ ಈ ವರ್ಷ ಪ್ರಕಟವಾದದ್ದಲ್ಲ. ಈ ವರ್ಷ ಸಮಯದ ಕಾರಣದಿಂದ ಪಠ್ಯವನ್ನು ಪರಿಷ್ಕರಿಸಿಲ್ಲ. ಮುಂದಿನ ವರ್ಷ ಪರಿಷ್ಕರಿಸುವಾಗ ಆ ಅಂಶವನ್ನು ಕೈಬಿಡುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.

Comments are closed.