ಕುಂದಾಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ( ರಿ)ತಾಲೂಕು ಸಮಿತಿ ಕುಂದಾಪುರ ಮತ್ತು ಗ್ರಾಮ ಶಾಖೆ ಗೋಪಾಡಿ ಬೀಜಾಡಿ ಇವರ ನೇತೃತ್ವದಲ್ಲಿ ಹತ್ತನೇ ತರಗತಿಯಲ್ಲಿ ಉತ್ತಮ ಅಂಕಗಳಿಸಿ ಉತ್ತಮ ಸಾಧನೆ ತೋರಿದ ಗೋಪಾಡಿ ಗ್ರಾಮದ ರೋಶನೀ ಧಾಮದ ಪರಿಶಿಷ್ಟ ಪಂಗಡ ಸಮುದಾಯದ ಸುನೀತಾ ಮತ್ತು ಅದೆ ಗ್ರಾಮದ ನಿವಾಸಿಯಾದ ಪರಿಶಿಷ್ಟ ಜಾತಿಯ ವಿದ್ಯಾರ್ಥಿನಿ ಪಲ್ಲವಿ ಇಬ್ಬರನ್ನು ಗುರುತಿಸಿ ವಿದ್ಯಾರ್ಥಿನಿಯರಿಗೆ ಕಲಿಕೆಯ ಕುರಿತು ಉತ್ತೇಜನ ನೀಡುವ ಸಲುವಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಕುಂದಾಪುರ ತಾಲೂಕು ಸಂಚಾಲಕ ಕೆ. ಸಿ. ರಾಜು ಬೆಟ್ಟಿನಮನೆ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಸಿ. ರಾಜು ಬೆಟ್ಟಿನಮನೆ, ಶೋಷಿತ ಸಮುದಾಯದ ಕಟ್ಟಕಡೆಯ ವ್ಯಕ್ತಿ ಮಾಡುವ ಸಾಧನೆಗೆ ಎಲ್ಲರೂ ಸಹಕಾರ ನೀಡಬೇಕು. ವಿದ್ಯೆಯಿಂದಲೇ ಸರ್ವವೂ ಸಾಧ್ಯವಾಗಿದ್ದು ಮನೆಮಕ್ಕಳು ಓದುವುದಕ್ಕೆ ಪೋಷಕರು ಬಡತನದಂತಹ ಕಷ್ಟಗಳನ್ನು ಬದಿಗಿಟ್ಟು ಉತ್ತೇಜನ ನೀಡಬೇಕು. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸರಕಾರ ಎಲ್ಲಾ ಸಹಕಾರ ನೀಡುತ್ತಿದ್ದು ಅದನ್ನು ಉಪಯೋಗಿಸಿಕೊಳ್ಳುವ ಕೆಲಸವಾಗಬೇಕು. ಸಾಧಕ ವಿದ್ಯಾರ್ಥಿಗಳ ಮೂಲಕ ಸಮುದಾಯದ ಅಭಿವ್ರದ್ಧಿ ನಡೆದು ಯುವಪೀಳಿಗೆಗೆ ಮಾದರಿಯಾಗಬೇಕು. ಸಂವಿಧಾನದ ರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು ಎಂದರು.
ಜ್ವಾಲಿ ಫ್ರೆಂಡ್ಸ್ ತಂಡದ ಅಧ್ಯಕ್ಷ ಉದಯ ಬಿ.ಎಮ್, ಮೆಸ್ಕಾಂ ಉದ್ಯೋಗಿ ನಾರಾಯಣ, ದಲಿತ ಸಂಘರ್ಷ ಸಮಿತಿ ಗೋಪಾಡಿ ಶಾಖೆ ಉಪಾಧ್ಯಕ್ಷ ಗಣೇಶ್, ಕಾರ್ಯದರ್ಶಿ ಗಣಪತಿ, ಮುಖಂಡರುಗಳಾದ ರಾಜ ಪಿ., ಅಶೋಕ, ರಾಮ ಬಿ.ಎಮ್, ಮಂಜುನಾಥ, ಪ್ರಕಾಶ, ಕುಶಲ, ಆನಂದ, ಚಂದ್ರ, ಮಹೇಶ, ಅಣ್ಣಪ್ಪ, ಗಂಗಾಧರ, ರಾದ, ಮಮತಾ ರಮೇಶ ಮತ್ತು ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.
ಗೋಪಾಡಿ ಶಾಖೆಯ ಸಂಚಾಲಕ ಅಣಪ್ಪ ಬಿ.ಎಮ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
Comments are closed.