ಕರಾವಳಿ

ಗೋಪಾಡಿ ರೋಷನಿಧಾಮದ ಕೊರಗ ಸಮುದಾಯದ ವಿದ್ಯಾರ್ಥಿನಿಗೆ SSLCಯಲ್ಲಿ 434 (69%) ಅಂಕ

Pinterest LinkedIn Tumblr

ಕುಂದಾಪುರ: ಗೋಪಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ರೋಷನಿಧಾಮ ಕಾಲನಿಯ ನಿವಾಸಿ ಕೊರಗ ಸಮುದಾಯದ ರಮೇಶ್ ಎನ್ನುವರ ಪುತ್ರಿ ಸುನೀತಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 434 ಅಂಕ ಪಡೆದು ಸಮುದಾಯಕ್ಕೆ ಹೆಮ್ಮೆ ತಂದಿದ್ದಾಳೆ‌.

ರೋಷನಿಧಾಮದ ನಿವಾಸಿಯಾಗಿರುವ ಈಕೆ ಕೋಟೇಶ್ವರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದು ಗೋಪಾಡಿ ಗ್ರಾಮಪಂಚಾಯತ್ ಇಚ್ಚಾಶಕ್ತಿಯಲ್ಲಿ ಐ.ಟಿ.ಡಿ.ಪಿ. ವತಿಯಿಂದ ಇಬ್ಬರು ಶಿಕ್ಷಕರನ್ನು ನಿಯೋಜಿಸಿ ಈ ಕಾಲನಿಯ ವಿದ್ಯಾರ್ಥಿಗಳಿಗೆ ತರಭೇತಿ ನೀಡಲಾಗುತ್ತಿತ್ತು. ಗ್ರಾಮಪಂಚಾಯತ್ ಮುತುವರ್ಜಿಯಿಂದ ಕಳೆದ ವರ್ಷವೂ ಓರ್ವ ವಿದ್ಯಾರ್ಥಿನಿ ತೇರ್ಗಡೆಯಾಗಿದ್ದಳು.

69% ಶೇಖಡಾ ಅಂಕ ಪಡೆದ ಸುನೀತಾ ‘ ಕನ್ನಡಿಗವರ್ಲ್ಡ್’ ಜೊತೆ ಮಾತನಾಡಿ, ತುಂಬಾ ಖುಚಿಯಾಗಿದೆ. ಮುಂದೆ ಸೈನ್ಸ್ ವಿಭಾಗದಲ್ಲಿ ಮುಂದುವರಿಯುವಾಸೆ ಎಂದರು. ಗೋಪಾಡಿ ಗ್ರಾಮಪಂಚಾಯತ್ ನಿಕಟಪೂರ್ವಾಧ್ಯಕ್ಷೆ ಸರಸ್ವತಿ ಪುತ್ರನ್, ವಿದ್ಯಾರ್ಥಿನಿ ಮುಂದಿನ ವಿದ್ಯಾಭ್ಯಾಸಕ್ಕೆ ವೈಯಕ್ತಿಕ ಸಹಕಾರದ ಜೊತೆ ಸರಕಾರದ ಸೌಲಭ್ಯ ಒದಗಿಸಿಕೊಡಲು ಪ್ರಯತ್ನಿಸಲಾಗುತ್ತದೆ ಎಂದರು.

ಕಾಲನಿಗೆ ತೆರಳಿ ಸಿಹಿ ಹಂಚಿದರು‌. ಸಮಾಜ ಸೇವಕ ಗಣೇಶ್ ಪುತ್ರನ್ ಈ ಸಂದರ್ಭ ಇದ್ದರು.

Comments are closed.