ಅಂತರಾಷ್ಟ್ರೀಯ

ಆಸ್ಟ್ರೊ ಮೋಹನ್’ಗೆ ಅಮೆರಿಕದ ಯುನೈಟೆಡ್ ಸ್ಟೇಟ್ಸ್ ಫೋಟೋಗ್ರಾಫರ್ಸ್ಅಲಿಯನ್ಸ್ ಸಂಸ್ಥೆಯ ಗೌರವ ಫೆಲೋಶಿಪ್

Pinterest LinkedIn Tumblr

ಉಡುಪಿ: ಅಮೆರಿಕದ ಯುನೈಟೆಡ್ ಸ್ಟೇಟ್ಸ್ ಫೋಟೋಗ್ರಾಫರ್ಸ್ ಅಲಿಯನ್ಸ್ ಸಂಸ್ಥೆ 2020 ಸಾಲಿನ ಗೌರವ ಫೆಲೋಶಿಪ್ ಪಟ್ಟಿಯನ್ನು ಪ್ರಕಟಿಸಿದ್ದು ಅದರಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೊ ಮೋಹನ್ ಅವರಿಗೆ ಗೌರವಫೆಲೋಶಿಪ್ ನೀಡಿ ಗೌರವಿಸಿದೆ.

ಎರಡು ವರ್ಷಗಳ ಹಿಂದೆ ಅಮೆರಿಕಾದ ಇಮೇಜ್ ಕೊಲೀಗ್ ಸೊಸೈಟಿ ಇಂದ ಮಾಸ್ಟರ್ ಪದವಿ ಪಡೆದಿದ್ದ ಆಸ್ಟ್ರೊ ಮೋಹನ್ ಅವರಿಗೆ ಈ ಗೌರವ ಲಭಿಸಿದೆ.

ಆಸ್ಟ್ರೊ ಮೋಹನ್ ಅವರು ತಮ್ಮ ಛಾಯಾಚಿತ್ರ ಪತ್ರಿಕೋದ್ಯಮದ ರಜತ ಸಂಭ್ರಮವನ್ನು ಬೆಂಗಳೂರಿನ ಎನ್.ಎಂ.ಕೆ.ಆರ್.ವಿ ಕಾಲೇಜಿನಲ್ಲಿ ಚಿತ್ರ ಪ್ರದರ್ಶನ ಮತ್ತು ತರಬೇತಿ ಮೂಲಕ ಆಚರಿಸಿದ್ದರು. 5 ಪುಸ್ತಕಗಳ ಗ್ರಂಥ ಕರ್ತರೂ ಆಗಿರುವ ಆಸ್ಟ್ರೊ ಮೋಹನ್. ಕೆನಾನ್ ಕೆಮರಾ ಸಂಸ್ಥೆಯ ಅಧಿಕೃತ ತರಬೇತಿದಾರರಾಗಿದ್ದಾರೆ .

Comments are closed.