ಕರಾವಳಿ

ವಿದ್ಯುತ್ ಶಾಕ್ ತಗುಲಿ‌ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ದಾರುಣ ಸಾವು: ಮಲ್ಪೆಯಲ್ಲಿ ದುರ್ಘಟನೆ

Pinterest LinkedIn Tumblr

ಉಡುಪಿ: ವಿದ್ಯುತ್ ಶಾಕ್ ಹೊಡೆದು ಎಸೆಸೆಲ್ಸಿ ಬಾಲಕ ಸಾವನ್ನಪ್ಪಿದ ಘಟನೆ ಜು.17 ರ ಶುಕ್ರವಾರ ರಾತ್ರಿ ಲಕ್ಷ್ಮೀನಗರದ ಗರ್ಡೆಯ 6 ನೇ ಕ್ರಾಸ್ ನಲ್ಲಿ ನಡೆದಿದೆ.

ಮೃತ ಬಾಲಕನನ್ನು ಮಂಜುನಾಥ್ ನಾಯಕ್ – ಶಕುಂತಲಾ ದಂಪತಿಯ ಪುತ್ರ ಗೌತಮ್ (16) ಎಂದು ಗುರುತಿಸಲಾಗಿದೆ. ಈತ ಮಿಲಾಗ್ರಿಸ್ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿದ್ದು ಎಸೆಸೆಲ್ಸಿ ಪರೀಕ್ಷೆ ಬರೆದಿದ್ದ.

ಶುಕ್ರವಾರ ರಾತ್ರಿ ಸುಮಾರು 7.30ರ ವೇಳೆಗೆ ಮನೆಯ ಅಂಗಳದ ಬಾವಿಯ ಪಂಪ್ ಮೇಲೆತ್ತುವ ಸಂದರ್ಭದಲ್ಲಿ ವಿದ್ಯುತ್ ಶಾಕ್ ತಗುಲಿ ಸಾವನ್ನಾಪ್ಪಿದ್ದಾನೆಂದು ಎಂದು ತಿಳಿದುಬಂದಿದೆ.

ಮಲ್ಪೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.