ಕರಾವಳಿ

ಮಂಗಳೂರಿನ ಕಾರ್‌ಸ್ಟ್ರೀಟ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರವೇಶ ಆರಂಭ

Pinterest LinkedIn Tumblr

ಮಂಗಳೂರು ಜುಲೈ 18 : ಮಂಗಳೂರಿನ ಹೃದಯ ಭಾಗವಾದ ರಥಬೀದಿಯಲ್ಲಿರುವ ಡಾ.ಪಿ. ದಯಾನಂದ ಪೈ – ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2020-21ನೇ ಸಾಲಿನ ಪದವಿ ಕೋರ್ಸುಗಳಿಗೆ ಪ್ರವೇಶಾತಿ ಆರಂಭಗೊಂಡಿದೆ.

ಪ್ರಥಮ ಬಿ.ಎ., ಬಿಕಾಂ., ಬಿಸಿಎ, ಬಿಬಿಎ, ಬಿಎಸ್ಸಿ ಹಾಗೂ ಬಿಎಸ್ ಡಬ್ಲ್ಯೂ ಪದವಿ ತರಗತಿಗಳಿಗೆ ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಸೂಕ್ತ ದಾಖಲಾತಿಗಳೊಂದಿಗೆ ಪ್ರವೇಶ ಪಡೆಯಬಹುದು.

ಮಂಗಳೂರು ವಿಶ್ವ ವಿದ್ಯಾನಿಲಯದ ಶಾಶ್ವತ ಸಂಯೋಜನೆಗೆ ಒಳಪಟ್ಟಿರುವ ಈ ಕಾಲೇಜಿನಲ್ಲಿ ಪರಿಣಿತ ಉಪನ್ಯಾಸಕರೊಂದಿಗೆ ಭಾಷಾ ಪ್ರಯೋಗಾಲಯ, ವಿಜ್ಞಾನ ಪ್ರಯೋಗಾಲಯಗಳು, ಗಣಕವಿಜ್ಞಾನ ಪ್ರಯೋಗಾಲಯಗಳು, ಸುಸಜ್ಜಿತವಾದ ಗ್ರಂಥಾಲಯ, ಮಲ್ಟಿ ಜಿಮ್, ಐಸಿಟಿ ತರಗತಿ ಕೋಣೆಗಳು, ವಿವಿಧ ರೀತಿಯ ವಿದ್ಯಾರ್ಥಿ ವೇತನಗಳು, ವಿದ್ಯಾರ್ಥಿನಿಯರಿಗೆ ಶುಲ್ಕ ವಿನಾಯಿತಿ, ಕೌಶಲ ತರಬೇತಿ, ಉದ್ಯೋಗ ಮೇಳಗಳ ಆಯೋಜನೆ, ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕೆಗಳಿಗ ಪ್ರೋತ್ಸಾಹ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಹೊಂದಿರುತ್ತದೆ.ಆದುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: 0824-2494109, 8970788947, 9663437451 ನ್ನು ಸಂಪರ್ಕಿಸಬಹುದು. ಅಥವಾ ಕಾಲೇಜಿನ ಆನ್ಲೈನ್ ತಾಣhttps://www.gfgcmcarstreet.org/admission ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಕಾಲೇಜಿನ ಪ್ರಾಂಶುಪಾಲ ಪ್ರೋ. ರಾಜಶೇಖರ ಹೆಬ್ಬಾರ್ ಸಿ. ಅವರ ಪ್ರಕಟಣೆ ತಿಳಿಸಿದೆ.

Comments are closed.