ಕರಾವಳಿ

ತಹಶೀಲ್ದಾರ್ ಹತ್ಯೆಗೆ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕದಿಂದ ಖಂಡನೆ

Pinterest LinkedIn Tumblr

ಮಂಗಳೂರು ಜುಲೈ 14 : ಬಂಗಾರುಪೇಟೆ ತಾಲ್ಲೂಕು ತಹಶೀಲ್ದಾರ್ ಬಿ.ಕೆ.ಚ0ದ್ರಮೌಳೇಶ್ವರ ರವರು ಜ0ಟಿ ಸರ್ವೆ ಕಾರ್ಯನಿರತರಾಗಿದ್ದ ಸ0ದರ್ಭದಲ್ಲಿ ಹತ್ಯೆಗೈದಿರುವುದು ಅತ್ಯ0ತ ವಿಷಾದನೀಯ. ಈ ಕೃತ್ಯವನ್ನು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸ0ಘದ ದ.ಕ. ಜಿಲ್ಲಾ ಘಟಕವು ತೀವ್ರವಾಗಿ ಖಂಡಿಸುತ್ತದೆ.

ಸರ್ಕಾರಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ಸ0ದರ್ಭಗಳಲ್ಲಿ ಇ0ತಹ ಘಟನೆಗಳು ಸ0ಭವಿಸುತ್ತಿದ್ದು, ಈ ಬಗ್ಗೆ ಕಠಿಣ ಕಾನೂನಿನ ಕೊರತೆಯಿ0ದಾಗಿ ಅಪರಾಧಗಳು ರಾಜ್ಯಾದ್ಯ0ತ ಹೆಚ್ಚಳವಾಗುತ್ತಿದ್ದು, ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವ ಸ0ಧಿಗ್ದ ಪರಿಸ್ಥಿತಿ ಉದ್ಬವಿಸಿರುತ್ತದೆ. ಸರ್ಕಾರ ಕೂಡಲೇ ತಪ್ಪಿತಸ್ಥರನ್ನು ಬ0ಧಿಸಿ ಕಾನೂನು ರೀತ್ಯ ಕ್ರಮಕೈಗೊಳ್ಳುವುದರ ಜೊತೆಗೆ ಇ0ತಹ ಕೃತ್ಯಗಳನ್ನು ಎಸಗುವವರ ಮೇಲೆ ಕಠಿಣ ಕಾನೂನುಗಳ ಮೂಲಕ ಕ್ರಮಕೈಗೊಳ್ಳುವ ಶಾಸನಗಳನ್ನು ರೂಪಿಸಿ ರಕ್ಷಣೆ ನೀಡಲು ಸ0ಘವು ಆಗ್ರಹಪಡಿಸುತ್ತದೆ.

ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸ0ಘದಲ್ಲಿ ಜಿಲ್ಲಾಧ್ಯಕ್ಷ ಪಿ.ಕೆ.ಕೃಷ್ಣ ರವರ ಉಪಸ್ಥಿತಿಯಲ್ಲಿ ಈ ಕೃತ್ಯವನ್ನು ಖ0ಡಿಸಿ ಎಲ್ಲಾ ನೌಕರರು ಮೃತರ ಆತ್ಮಕ್ಕೆ ಶಾ0ತಿ ಕೋರಿ ಎರಡು ನಿಮಿಷಗಳ ಮೌನ ಆಚರಿಸಿ ಶ್ರದ್ಧಾ0ಜಲಿಯನ್ನು ಅರ್ಪಿಸಲಾಯಿತು.

ಈ ಅಮಾನುಷ ಹತ್ಯೆಯನ್ನು ಖ0ಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸ0ಧರ್ಭದಲ್ಲಿ ಜಿಲ್ಲೆಯ ಎಲ್ಲಾ ಸದಸ್ಯರು ಇಲಾಖಾ ನೌಕರರು ಹಾಜರಿದ್ದರು ಎಂದು ಜಿಲ್ಲಾಧ್ಯಕ್ಷರ ಪ್ರಕಟಣೆ ತಿಳಿಸಿದೆ.

Comments are closed.