ಕರಾವಳಿ

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ : ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

Pinterest LinkedIn Tumblr

ಉಡುಪಿ: ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವೃಂದದ ವಿವಿಧ ಹುದ್ದೆಗಳ ನೇರ ನೇಮಕಾತಿ ಸಂಬಂದ ಅರ್ಜಿ ಆಹ್ವಾನಿಸಲಾಗಿದ್ದು, ಪ್ರಸ್ತುತ ರಾಜ್ಯದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಈ ಹಿಂದೆ ನಿಗಧಿಪಡಿಸಲಾಗಿದ್ದ ಅರ್ಜಿ ಅಹ್ವಾನದ ದಿನಾಂಕಗಳನ್ನು ಈ ಮುಂದಿನಂತೆ ವಿಸ್ತರಿಸಿದ್ದು, ಅರ್ಹತಾ ಷರತ್ತುಗಳಲ್ಲಿ (ವಯೋಮಿತಿ ಸೇರಿದಂತೆ) ಯಾವುದೇ ಬದಲಾವಣೆಗಳಿರುವುದಿಲ್ಲ ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.

ಆರ್.ಎಸ್.ಐ.( ಸಿಎಆರ್/ಡಿಎಆರ್) 45 ಹುದ್ದೆಗಳು , ಅರ್ಜಿ ಸಲ್ಲಿಸಲು ಜುಲೈ 16 ಕೊನೆಯ ದಿನವಾಗಿದ್ದು, ಶುಲ್ಕ ಪಾವತಿಸಲು ಜುಲೈ 18 ಕೊನೆಯ ದಿನಾಂಕವಾಗಿದೆ. ಸ್ಟೆ.ಆರ್.ಎಸ್.ಐ (ಕೆಎಸ್‌ಆರ್‌ಪಿ) 40 ಹುದ್ದೆಗಳು, ಅರ್ಜಿ ಸಲ್ಲಿಸಲು ಜುಲೈ 18 ಕೊನೆಯ ದಿನವಾಗಿದ್ದು, ಶುಲ್ಕ ಪಾವತಿಸಲು ಜುಲೈ 21 ಕೊನೆಯ ದಿನಾಂಕವಾಗಿದೆ. ಎಸ್.ಐ (ಕೆ.ಎಸ್.ಐ.ಎಸ್.ಎಫ್) 51 ಹುದ್ದೆಗಳು , ಅರ್ಜಿ ಸಲ್ಲಿಸಲು ಜುಲೈ 18 ಕೊನೆಯ ದಿನವಾಗಿದ್ದು, ಶುಲ್ಕ ಪಾವತಿಸಲು ಜುಲೈ 21 ಕೊನೆಯ ದಿನಾಂಕವಾಗಿದೆ.ಪಿ.ಎಸ್.ಐ. (ವೈರ್‌ಲೆಸ್) 26 ಹುದ್ದೆಗಳು , ಅರ್ಜಿ ಸಲ್ಲಿಸಲು ಜುಲೈ 18 ಕೊನೆಯ ದಿನವಾಗಿದ್ದು, ಶುಲ್ಕ ಪಾವತಿಸಲು ಜುಲೈ 21 ಕೊನೆಯ ದಿನಾಂಕವಾಗಿದೆ.

Comments are closed.