ಕರಾವಳಿ

ತಂದೆಯ ನಿಧನ ಹಿನ್ನೆಲೆ ಭಾಸ್ಕರ್ ಶೆಟ್ಟಿ ಕೊಲೆ ಆರೋಪಿ ನಿರಂಜನ್ ಭಟ್’ಗೆ ಷರತ್ತುಬದ್ದ ತಾತ್ಕಾಲಿಕ ಜಾಮೀನು

Pinterest LinkedIn Tumblr

ಉಡುಪಿ: ನಾಲ್ಕು ವರ್ಷಗಳ ಹಿಂದೆ ಕರಾವಳಿಯನ್ನುಬೆಚ್ಚಿಬೀಳಿಸಿದ ಹೋಮ ಕುಂಡ ಕೊಲೆ ಪ್ರಕರಣ ಎಂದೇ ಕುಖ್ಯಾತಿಯಾದ ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳ ಪೈಕಿ ನಿರಂಜನ್ ಭಟ್ ಎನ್ನುವಾತನಿಗೆ ಉಡುಪಿ ಜಿಲ್ಲಾ ಸೆಷನ್ಸ್ ಕೋರ್ಟ್ ಬುಧವಾರ ಶರತ್ತುಬದ್ಧ ತಾತ್ಕಾಲಿಕ ಜಾಮೀನು ನೀಡಿದೆ.

2016 ಜುಲೈ 28ರಂದು ಉಡುಪಿಯ ಉದ್ಯಮಿಯನ್ನು ಪತ್ನಿ ರಾಜೇಶ್ವರಿ ಶೆಟ್ಟಿ ಮತ್ತು ಮಗನೊಂದಿಗೆ ಸೇರಿ ನಿರಂಜನ ಭಟ್ಟ ಕೊಲೆ ಮಾಡಿ ನಂದಳಿಕೆಯ ಮನೆಯಲ್ಲಿ ಹೋಮಕುಂಡದಲ್ಲಿ ಸುಟ್ಟಿದ್ದ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿರಂಜನ ಭಟ್ಟನ ತಂದೆ ಶ್ರೀನಿವಾಸ ಭಟ್ಟ 65 ಮತ್ತು ಕಾರಿನ ಚಾಲಕನನ್ನು ಸೇರಿ 5 ಜನ ಆರೋಪಿಗಳನ್ನು ಬಂಧಿಸಲಾಗಿದೆ.

ಮುಖ್ಯ ಆರೋಪಿ ರಾಜೇಶ್ವರಿ ಶೆಟ್ಟಿ ಈಗಾಗಲೇ ಜಾಮೀನು ಹೊಂದಿದ್ದು ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ಕು ಮಂದಿಗೆ ಜಾಮೀನು ದೊರೆತಿದೆ ಭಾಸ್ಕರ್ ಶೆಟ್ಟಿ ಮಗ ನವನೀತ್ ಶೆಟ್ಟಿ ಈವರೆಗೂ ಜಾಮೀನು ಸಿಕ್ಕಿಲ್ಲ.

ನಿರಂಜನ ಭಟ್ಟನ ತಂದೆ ಶ್ರೀನಿವಾಸ ಭಟ್ಟ 2 ದಿನಗಳ ಹಿಂದೆ ಖಿನ್ನತೆಗೆ ಮತ್ತು ಅನಾರೋಗ್ಯದಿಂದ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ನಿರಂಜನನಿಗೆ ಜುಲೈ 15ರ ತನಕ ರೂ 5 ಲಕ್ಷ ರೂಪಾಯಿ ಬಾಂಡ್ ನೊಂದಿಗೆ ಷರತ್ತುಬದ್ಧ ಜಾಮೀನನ್ನು ಉಡುಪಿ ಜಿಲ್ಲಾ ನ್ಯಾಯಾಲಯ ನೀಡಿದೆ.

Comments are closed.