ಕುಂದಾಪುರ: ತಾಲ್ಲೂಕಿನ ಗ್ರಾಮೀಣ ಭಾಗದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಅನೂಕೂಲವಾಗುವಂತೆ 4 ಮಾರ್ಗಗಳಲ್ಲಿ ಜೂ.25 ರಿಂದ ಜು.4 ರವರೆಗೆ ಶ್ರೀ ದುರ್ಗಾಂಬಾ ಬಸ್ಸುಗಳನ್ನು ಓಡಿಸಲು ಬಸ್ಸಿನ ಮಾಲಿಕರಾದ ಅನಿಲ್ ಚಾತ್ರ ಒಪ್ಪಿಗೆ ನೀಡಿದ್ದಾರೆ ಎಂದು ಕುಂದಾಪುರ ವಲಯ ಶಿಕ್ಷಣಾಧಿಕಾರಿ ಅಶೋಕ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(File Photo)
ಜೂ.15 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಬರಲು ಅನೂಕೂಲವಾಗುವಂತೆ ಖಾಸಗಿ ಬಸ್ಸುಗಳ ಸೇವೆಯನ್ನು ಪಡೆದುಕೊಳ್ಳಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶ್ರೀ ದುರ್ಗಾಂಬಾ ಬಸ್ಸಿನ ಆಡಳಿತ ಕಚೇರಿಗೆ ಭೇಟಿ ನೀಡಿ ಮಾತುಕತೆ ನಡೆಸಿದಾಗ ಅವರು ಬಸ್ಸು ಓಡಾಟಕ್ಕೆ ಸಮ್ಮತಿ ಸೂಚಿಸಿದ್ದಾರೆ ಎಂದು ಬಿಇಓ ತಿಳಿಸಿದ್ದಾರೆ.
ತಾಲ್ಲೂಕಿನ ಶೇಡಿಮನೆ–ಬಿದ್ಕಲ್‌ಕಟ್ಟೆ–ಕುಂದಾಪುರ, ಅಮಾಸೆಬೈಲು–ಬಿದ್ಕಲ್‌ಕಟ್ಟೆ–ಕುಂದಾಪುರ, ಮುದೂರು–ಹಳ್ಳಿಹೊಳೆ–ಸಿದ್ಧಾಪುರ–ಕುಂದಾಪುರ ಹಾಗೂ ಬಾಗಿಮನೆ–ಹೊಸಂಗಡಿ–ಸಿದ್ಧಾಪುರ–ಶಂಕರನಾರಾಯಣ–ಬಿದ್ಕಲ್‌ಕಟ್ಟೆ–ಉಡುಪಿ ಮಾರ್ಗವಾಗಿ ಬಸ್ಸುಗಳು ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Comments are closed.