ಕರಾವಳಿ

ಪ್ರಯಾಣಿಕರ ಅನುಕೂಲಕ್ಕಾಗಿ KSRTC ಮಾಸಿಕ ಬಸ್ ಪಾಸ್ ಸೌಲಭ್ಯ

Pinterest LinkedIn Tumblr

ಉಡುಪಿ: ಕೋವಿಡ್ -19 ಸಂಕ್ರಾಮಿಕ ರೋಗವು ಹರಡುವುದನ್ನು ತಡೆಗಟ್ಟುವ ಸಲುವಾಗಿ ಸರ್ಕಾರವು ದಿನಾಂಕ 23.03.2020 ರಿಂದ ಲಾಕ್ ಡೌನ್ ಮಾಡಿರುವುದರಿಂದ ಸದರಿ ಅವಧಿಯಲ್ಲಿ ನಿಗಮದ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿರುತ್ತದೆ. ಪ್ರಸುತ್ತ ಕೋವಿಡ್ 19 ಲಾಕ್ ಡೌನ್ ಸಡಿಲಗೊಂಡ ಹಿನ್ನಲೆಯಲ್ಲಿ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ನಿಗಮದ ಸಾರಿಗೆ ಸೇವೆಗಳ ಕರ್ಯಾಚರಣೆಯಲ್ಲಿ ಸಹ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಮೇ 19 ರಿಂದ ಅವಶ್ಯಕತೆಗನುಸಾರ ಸಾರಿಗೆಗಳ ಕರ್ಯಾಚರಣೆಯನ್ನು ಆರಂಭಿಸಲಾಗಿರುತ್ತದೆ.

ನಿಗಮದ ಸಾಮಾನ್ಯ ಹಾಗೂ ವೇಗದೂತ ಸಾರಿಗೆಗಳಲ್ಲಿ ಪ್ರತಿ ನಿತ್ಯ ಪ್ರಯಾಣಿಸುವ ಪ್ರಯಾಣಿಕರ ಅನುಕ್ಕೂಲಕ್ಕಾಗಿ ಮಾಸಿಕ ಬಸ್ ಪಾಸ್ ಸೌಲಭ್ಯವಿದ್ದು ,ಮಂಗಳೂರು /ಸ್ಪೇಟ್ ಬ್ಯಾಂಕ್-ಉಡುಪಿ ,ಉಡುಪಿ-ಕುಂದಾಪುರ ಮಾರ್ಗಗಳಲ್ಲಿ ಸದರಿ ಮಾಸಿಕ ಪಾಸುಗಳನ್ನು ದಿನಾಂಕ 20.06.2020 ರಿಂದ ವಿತರಿಸಲಾಗುತ್ತಿದೆ.

ಆದುದರಿಂದ ಸದರಿ ಪಾಸು ಸೌಲಭ್ಯಗಳನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ಉಡುಪಿ ಬಸ್ ನಿಲ್ದಾಣ: 96632 66400,ಕುಂದಾಪುರ ಬಸ್ಸು ನಿಲ್ದಾಣ:96632 66009 ಮಂಗಳೂರು ಬಸ್ ನಿಲ್ದಾಣ: 77609 90720, ಸ್ಪೇಟ್ ಬ್ಯಾಂಕ್ ಬಸ್ಸು ನಿಲ್ದಾಣ;96632 66001 ಸಂಪರ್ಕಿಸಬಹು ಎಂದು ಕರಾರಸಾಸಂ ಮುಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಅವರ ಪ್ರಕಟಣೆ ತಿಳಿಸಿದೆ.

Comments are closed.