ಕರಾವಳಿ

ಸತೀಶ್ ಎಮ್ ಭಟ್ಟರ ನೇತೃತ್ವದಲ್ಲಿ ನಡೆದ 83 ದಿನಗಳ ಅನ್ನದಾನ ಸಂತರ್ಪಣೆ ಸಂಪನ್ನ : ಸಮಾಜ ಸೇವಕ ಶೇಖರ್ ಪೂಜಾರಿ ಬ್ರಹ್ಮಾವರ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ

Pinterest LinkedIn Tumblr

ಮುಂಬಾಯಿ : ಮುಂಬೈ ಮಹಾನಗರದ ಅನೇಕ ಸ್ಥಳಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥ ಗೊಂಡು ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.ಅಂತಹ ವಿಷಮ ಘಳಿಗೆಯಲ್ಲಿ,ಹಸಿದವರಿಗೆ ಅಶಕ್ತರಿಗೆ ಮಲಾಡ್ ಪೂರ್ವದ ಸುರಭಿ ಹೋಟೆಲ್ ಎದುರುಗಡೆ ಹಾಗೂ ಇನ್ನಿತರ ನಾಲ್ಕು ಸ್ಥಳಗಳಲ್ಲಿ ಸಮಾಜಸೇವಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ಸತೀಶ್ ಎಮ್ ಭಟ್ ತಮ್ಮ ಅಧ್ಯಕ್ಷತೆಯ “ತತಾಸ್ಥು ಫೌಂಡೇಶನ್” ಮುಖಾಂತರ, 83 ದಿನಗಳು ನಿರಂತರ ಅನ್ನದಾನವನ್ನು ಏರ್ಪಡಿಸಿದ್ದು 14/6/2020ರಂದು ಅನ್ನಪೂರ್ಣೇಶ್ವರಿ ಮಹಾಗಣಪತಿ ಯನ್ನು ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿ ಅನ್ನದಾನ ಸಂಪನ್ನಗೊಂಡಿದೆ.

ಶೇಖರ್ ಪೂಜಾರಿಯವರಿಗೆ ಸಾರ್ವಜನಿಕ ಶೃದ್ಧಾಂಜಲಿ:

ಇದೇ ಸಂದರ್ಭದಲ್ಲಿ ಶ್ರೇಷ್ಠ ಸಮಾಜ ಸೇವಕ,ಸಂಘಟಕ ದಿವಂಗತ ಶೇಖರ್ ಪೂಜಾರಿ ಬ್ರಹ್ಮಾವರ ರವರಿಗೆ ಸಾರ್ವಜನಿಕ ಶೃದ್ಧಾಂಜಲಿ ಅವರು ಹಿತೈಷಿ ಬಂಧುಗಳ ಹಾಗೂ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಸಂಚಾಲಕ ಪತ್ರಕರ್ತ ದಿನೇಶ್ ಕುಲಾಲ್ ಗೌರವ ಕೋಶಧಿಕಾರಿ ಜಗನ್ನಾಥನ್ ಮೆಂಡನ್ ಸಾಲಿಗ್ರಾಮ ತಥಾಸ್ತು ಫೌಂಡೇಶನ್ನ ಸಕ್ರಿಯ ಕಾರ್ಯಕರ್ತರಾದ ಲಕ್ಷ್ಮಣರಾವ್ ಸದಾನಂದ ಶೆಟ್ಟಿ ಸುಬ್ಬಣ್ಣ ನಾಯಕ್ ಮತ್ತು ಮಹಿಳಾ ವಿಭಾಗದ ಸದಸ್ಯರ ಉಪಸ್ಥಿತಿಯಲ್ಲಿ ಸತೀಶ್ ಭಟ್ ಅವರು ವಿಶೇಷ ಪ್ರಾರ್ಥನೆ ನಡೆಸಿ ಶೇಖರ್ ಪೂಜಾರಿ ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಅವರ ಸೇವಾ ಅಜರಾಮರ ವಾಗಿರುಲಿ ಎಂದು ನುಡಿದರು.

ಏಕಕಾಲಕ್ಕೆ ಮಲಾಡ್ 4 ಸ್ಥಳಗಳಲ್ಲಿ ಅನ್ನದಾನ ನಡೆಯಿತು. ಅನ್ನದಾನ ನಡೆಯುತ್ತಿದ್ದಂತೆ ಅನ್ನ ಪ್ರಸಾದ ವನ್ನು ಸ್ವೀಕರಿಸಲು ಆಗಮಿಸಿದ್ದ ಎಲ್ಲರೂ ಭಾರತಮಾತೆ ಜೈಕಾರ ಹಾಕುತ್ತಿದ್ದರು. ಸತೀಶ್ ಭಟ್ ಅವರ ಸಾಮಾಜಿಕ ಕಳಕಳಿಗೆ ಸರ್ವ ಭಾಷಿಗ ಜನಾಂಗದವರು ಪ್ರಶಂಶಿಸಿದ್ದಾರೆ.

ದಿನೇಶ್ ಕುಲಾಲ್

Comments are closed.