ಕರಾವಳಿ

ಎಸಿ ಎದುರು ಕ್ಷಮೆಯಾಚನೆಯಲ್ಲಿ ತಾರ್ಕಿಕ ಅಂತ್ಯಗೊಂಡು ರಾಜಿಯಾದ ವಿಎ ಮತ್ತು ವೈದ್ಯರ ಜಟಾಪಟಿ!

Pinterest LinkedIn Tumblr

ಕುಂದಾಪುರ: ಕೊರೋನಾ ಸಂಬಂಧಿಸಿದಂತೆ ಗಂತಲು ದ್ರವ ಪರೀಕ್ಷೆಗೆ ಬಂದ ಗ್ರಾಮ ಲೆಕ್ಕಾಧಿಕಾರಿಗೆ ಬೈಂದೂರು ವೈದ್ಯರಿಂದ ಹಲ್ಲೆ ನಡೆದಿದೆ ಎನ್ನಲಾದ ಪ್ರಕರಣವು ಮತ್ತೊಂದು ಮಗ್ಗಲು ಪಡೆದಿದ್ದು ಗ್ರಾಮ ಲೆಕ್ಕಾಧಿಕಾರಿಯೇ ಕ್ಷಂಎ ಕೇಳುವ ಮೂಲಕ ಇಂದು ಪ್ರಕರಣವು ತಾರ್ಕಿಕ ಅಂತ್ಯ ಕಂಡಿದೆ. ಘಟನೆಗಳಿಗೆ ಸಂಬಂದಿಸಿದಂತೆ ಇಂದು ವಿ.ಎ ಅಂಜನಪ್ಪ ಕ್ಷಮೆ ಯಾಚಿಸುವುದರೊಂದಿಗೆ ಪ್ರಕರಣಕ್ಕೊಂದು ಸುಖಾಂತ್ಯ ದೊರಕಿತು.

ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯ ಮಹೇಂದ್ರ ಶೆಟ್ಟಿ ಕ್ಷಮೆ ಕೇಳಬೇಕು ಎಂದು ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಆಗ್ರಹಿಸಿತ್ತು. ಇತ್ತೀಚೆಗೆ ಕುಂದಾಪುರದ ಉಪ ವಿಭಾಗಾಧಿಕಾರಿಗಳ ಸಮಕ್ಷಮದಿಂದ ವೈದ್ಯ ಡಾ|ಮಹೇಂದ್ರ ಶೆಟ್ಟಿ ಕ್ಷಮೆ ಕೇಳಿದ್ದರು. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿ ಮಾನಹಾನಿ ಮಾಡಲಾಗಿದೆ ಎಂದು ವೈದ್ಯ ಡಾ|ಮಹೇಂದ್ರ ಶೆಟ್ಟಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಮತ್ತೆ ಈ ಪ್ರಕರಣ ಸಕ್ರೀಯಗೊಂಡಿದ್ದು ಪ್ರಕರಣವನ್ನು ಇತ್ಯರ್ಥಗೊಳಿಸುವಂತೆ ಎಸಿಗೆ ಸೂಚನೆ ನೀಡಲಾಗಿತ್ತು.

ಇಂದು ಕುಂದಾಪುರ ಎಸಿ ಕೆ. ರಾಜು ನೇತೃತ್ವದಲ್ಲಿ ಇಂದು ಗ್ರಾಮ ಲೆಕ್ಕಾಧಿಕಾರಿಗಳು, ವೈದ್ಯರುಗಳ ಸಭೆ ನಡೆದಿದ್ದು, ಸಭೆಯಲ್ಲಿ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು, ವೈದ್ಯಕೀಯ ನೌಕರರ ಸಂಘದವರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಕುಂದಾಪುರ ಎಸಿ ಕೆ. ರಾಜು ಬಳಿ ವಿಷಾದ ವ್ಯಕ್ತಪಡಿಸಿದ ವಿಎ ಅಂಜನಪ್ಪ ಕ್ಷಮೆ ಯಾಚಿಸಿದ್ದಾರೆ.

ವಿಎ ಕ್ಷಮೆ ಕೇಳುವ ಮೂಲಕ ಪ್ರಕರಣ ಸುಖಾಂತ್ಯವಾಗಿದೆ ಎಂದು ಸರಕಾರಿ ವೈದ್ಯಾಧಿಕಾರಿಗಳ ಸಂಘದ ಉಡುಪಿ ಶಾಖೆ ಅಧ್ಯಕ್ಷ ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ.

Comments are closed.