ಕರಾವಳಿ

ಕುಂದಾಪುರದ ನಾಡದಲ್ಲಿ ನಿರ್ಮಾಣ ಹಂತದ ಬಾವಿಗೆ ಆಕಸ್ಮಿಕವಾಗಿ ಬಿದ್ದು ವ್ಯಕ್ತಿ ದಾರುಣ ಸಾವು

Pinterest LinkedIn Tumblr

ಕುಂದಾಪುರ: ನಿರ್ಮಾಣ ಹಂತದಲ್ಲಿರುವ ಬಾವಿಗೆ ಆಕಸ್ಮಿಕವಾಗಿ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ ದಾರುಣ ಘಟನೆ ನಾಡ ಜನತಾ ಕಾಲನಿಯಲ್ಲಿ ನಡೆದಿದೆ. ಗುಲ್ವಾಡಿ ಗ್ರಾಮದ ಶೆಟ್ರಕಟ್ಟೆ ನಿವಾಸಿ ಲಕ್ಷ್ಮಣ ಪೂಜಾರಿ (38) ಸಾವನ್ನಪ್ಪಿದ ದುರ್ದೈವಿ.

ನಾಡಗುಡ್ಡೆಯಂಗಡಿ ಜನತಾ ಕಾಲನಿ ನಿವಾಸಿ ಲಕ್ಷ್ಮೀ ಪೂಜಾರಿಯವರ ಮನೆಯ ಬಾವಿ ನಿರ್ಮಾಣ ಹಂತದಲ್ಲಿದ್ದು, ಬಾವಿಗೆ ಹಾಕಲಾಗಿದ್ದ ರಿಂಗ್‍ನ ಸುತ್ತಲೂ ಮಣ್ಣು ಹಾಕುವ ಕಾಮಗಾರಿ ನಡೆಯುತ್ತಿತ್ತು. ಈ ವೇಳೆಯಲ್ಲಿ ಲಕ್ಷ್ಮಣ ಪೂಜಾರಿ ಕಾಮಗಾರಿಯನ್ನು ವೀಕ್ಷಿಸುತ್ತಿರುವಾಗ ದುರ್ಘಟನೆ ಸಂಭವಿಸಿದೆ. ಬಾವಿಗೆ ಬಿದ್ದ ಲಕ್ಷ್ಮಣ ಪೂಜಾರಿಯವರನ್ನು ರಕ್ಷಿಸುವ ಪ್ರಯತ್ನ ನಡೆಸಿಲಾಯಿತಾದರೂ ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಗಂಗೊಳ್ಳಿ ಠಾಣೆಯ ಪಿಎಸ್‍ಐ ಭೀಮಾಶಂಕರ್ ಹಾಗೂ ಸಿಬ್ಬಂದಿಗಳು, ಗಂಗೊಳ್ಳಿಯ ಆಪತ್ಭಾಂಧವ 24/7 ಆಂಬುಲೆನ್ಸ್ ಸ್ವಯಂ ಸೇವಕರ ಸಹಕಾರದಿಂದ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ.

ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.