ಕರಾವಳಿ

ಬಿಜೆಪಿ ಉಡುಪಿ‌ ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷರಾಗಿ ಕುಂದಾಪುರದ ಗೋಪಾಲ‌ ಕಳಿಂಜೆ ಆಯ್ಕೆ

Pinterest LinkedIn Tumblr
ಕುಂದಾಪುರ: ಉಡುಪಿ ಜಿಲ್ಲಾ ಬಿಜೆಪಿ ವಿವಿಧ ಮೋರ್ಚಾಗಳ ಪಟ್ಟಿ ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದು ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷರಾಗಿ ಕುಂದಾಪುರ ಮೂಲದ ಗೋಪಾಲ ಕಳಿಂಜೆ ಆಯ್ಕೆಯಾಗಿದ್ದಾರೆ.
ಗೋಪಾಲ ಕಳಿಂಜೆ ಅವರು 26 ವರ್ಷಗಳ ಹಿಂದೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ ದುಡಿದು 1998ರಲ್ಲಿ ಆನಗಳ್ಳಿ ಸ್ಥಾನೀಯ ಸಮಿತಿ ಅಧ್ಯಕ್ಷ, 2004 ರಲ್ಲಿ ಕುಂದಾಪುರ ಕ್ಷೇತ್ರ ಬಿಜೆಪಿಯಲ್ಲಿ ಸಕ್ರೀಯ ಸದಸ್ಯರಾಗಿ, 2008 ರಲ್ಲಿ ಪ್ರಧಾನ ಕಾರ್ಯದರ್ಶಿ, 2016ರಲ್ಲಿ ಕುಂದಾಪುರ ಕ್ಷೇತ್ರ ಎಸ್ಸಿ ಮೋರ್ಚಾ ಅಧ್ಯಕ್ಷರಾಗಿ, 2018-19ನೇ ಸಾಲಿನಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸದ್ಯ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷರಾಗಿದ್ದಾರೆ.
ರಾಜ್ಯದಲ್ಲಿ ನಮ್ಮದೆ ಸರಕಾರ ಇದ್ದು ಉಡುಪಿ ಜಿಲ್ಲೆಯ ಪರಿಶಿಷ್ಟ ಜಾತಿ ಬಾಂಧವರಿಗೆ ಡಿಸಿ ಮನ್ನಾ ಭೂಮಿಯನ್ನು ಒದಗಿಸಿಕೊಡುವ ಇರಾದೆ ಇಟ್ಟುಕೊಂಡಿದ್ದು ಈ ಬಗ್ಗೆ ಸಚಿವರ ಬಳಿ‌ ಮಾತನಾಡುವ ಮೂಲಕ ದಲಿತ ಸಮುದಾಯದ ಪ್ರತಿ ಕುಟುಂಬಕ್ಕೆ 10 ಸೆಂಟ್ಸ್ ಜಾಗ ಮಂಜೂರು ಮಾಡುವಂತೆ ವಿನಂತಿಸುವೆ. ಬಿಜೆಪಿ ಪಕ್ಷವು ನಿಷ್ಟಾವಂತ ಕಾರ್ಯಕರ್ತನಿಗೆ ಸದಾ ಬೆಲೆ ಕೊಡುತ್ತದೆ ಎನ್ನುವುದಕ್ಕೆ ನನಗೆ ಸಿಕ್ಕ ಜವಬ್ದಾರಿಯೇ ಸಾಕ್ಷಿ ಎಂದು ಕಳಿಂಜೆ ಹೇಳಿದ್ದು ಪಕ್ಷದ ಜಿಲ್ಲೆಯ ಹಿರಿಯ ನಾಯಕರುಗಳ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾ

Comments are closed.