ಕರಾವಳಿ

ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಮಾರ್ಗಸೂಚಿಯೊಂದಿಗೆ ದೇವರ ದರ್ಶನಕ್ಕೆ ಅವಕಾಶ

Pinterest LinkedIn Tumblr

ಮಂಗಳೂರು : ಲಾಕ್ ಡೌನ್ ನಿಂದಾಗಿ ಕಳೆದ ಕೆಲ ಸಮಯದಿಂದ ಶ್ರೀ ಕ್ಷೇತ್ರಕ್ಕೆ ಭಕ್ತಾದಿಗಳ ಪ್ರವೇಶ ನಿರ್ಬಂಧಿಸಿರುವುದನ್ನು ಇದೀಗ ಸರಕಾರವು ತೆರವು ಗೊಳಿಸಿದೆ. ಕ್ಷೇತ್ರಕ್ಕೆ ಆಗಮಿಸುವವರೆಲ್ಲರೂ ಈ ರೀತಿಯಂತೆ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

*ಕ್ಷೇತ್ರಕ್ಕೆ ಆಗಮಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕ್ಷೇತ್ರ ಪ್ರವೇಶಿಸುವಾಗ ಕೈಕಾಲು ತೊಳೆದುಕೊಂಡು, ಕ್ಷೇತ್ರದ ಪ್ರವೇಶ ದ್ವಾರದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಉಪಯೋಗಿಸಬೇಕು ಮತ್ತು ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕು.

ಕ್ಷೇತ್ರದ ಹೊರಗಡೆಯಿರುವ ರಿಜಿಸ್ಟರ್ ನಲ್ಲಿ ನಿಮ್ಮ ಹೆಸರು ಮೊಬೈಲ್ ಸಂಖ್ಯೆ ಬರೆದು ಕ್ಷೇತ್ರವನ್ನು ಪ್ರವೇಶಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ನೀವು ಕ್ಷೇತ್ರ ಪ್ರವೇಶಿಸಿದ ನಂತರ ದೇವರ ದರ್ಶನ, ಸೇವೆ ನಡೆಸಿದ ನಂತರ ತಕ್ಷಣವೇ ತೆರಳಬೇಕು.

ಕ್ಷೇತ್ರದ ಪರಿಸರದಲ್ಲಿ ಯಾರೂ ಗುಂಪು ಗುಂಪಾಗಿ ನಿಲ್ಲಬಾರದು. ರಂಗ ಪೂಜೆ, ಸರ್ವಾಲಂಕಾರ ಹೊರತು ಪಡಿಸಿ ಎಲ್ಲಾ ಸೇವೆ ಮಾಡಿಸಬಹುದು. ಯಾವುದೇ ಸೇವೆಗೆ ಒಂದೇ ಆರತಿ. ಸೇವೆಗಳಿಗೆ ಪ್ರಸಾದ ನೀಡಲಾಗುವುದು.

ಕ್ಷೇತ್ರ ದರ್ಶನ ಸಮಯ ಬೆಳಗ್ಗೆ 7 ರಿಂದ ಮಧ್ಯಾಹ್ನ 1. ಸಂಜೆ 5 ರಿಂದ ರಾತ್ರಿ 7.30 ತನಕ ತೆರೆದಿರುತ್ತದೆ. ಸಂತರ್ಪಣೆ ಸದ್ಯಕ್ಕೆ ನಡೆಯುವುದಿಲ್ಲ. 10 ವರ್ಷದ ಕೆಳಗಿನ ಮಕ್ಕಳು, ಗರ್ಭಿಣಿ ಸ್ತ್ರೀಯರು, ವಯೋವೃದ್ಧರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಕೊರೋನಾ ವೈರಸ್ ಹರಡುವ ಮುಂಜಾಗ್ರತಾ ಕ್ರಮವಾಗಿ ಈ ಕ್ರಮಗಳನ್ನು ಕ್ಷೇತ್ರದ ಆಡಳಿತ ಮಂಡಳಿ ಇನ್ನೂ ಕೆಲ ಸಮಯದ ವರೆಗೆ ಕೈಗೊಳ್ಳಲಾಗಿದೆ ಎಂದು ಆಡಳಿತ ಮಂಡಳಿಯ ಪರವಾಗಿ ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ್ ಕೆ. ಕೇಶವ ಆಚಾರ್ಯ ಅವರು ತಿಳಿಸಿದ್ದಾರೆ.

Comments are closed.