ಕರಾವಳಿ

ದೇಶದಲ್ಲಿ ಜೀವವೈವಿದ್ಯ ಸಂರಕ್ಷಣೆಯ ಪ್ರಮುಖ ಕಾರ್ಯತಂತ್ರವಾಗಿ ಕಾರ್ಯನಿರ್ವಹಿಸುತ್ತದೆ : ಶ್ರೀ ಸುಬ್ರಹ್ಮಣ್ಯ ಆಚಾರ್

Pinterest LinkedIn Tumblr

ಮಂಗಳೂರು : ಪ್ರತಿ ವರ್ಷ ಜೂನ್-5ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಕಣಿಯೂರು, ಬೆಳ್ತಂಗಡಿ ತಾಲೂಕಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಪಂಚಾಯತ್ ಆಯುಷ್ ಇಲಾಖೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆ, ಬೆಳ್ತಂಗಡಿ ಇವರ ಸಹಯೋಗದೊಂದಿಗೆ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬೆಳ್ತಂಗಡಿ ವಲಯ ಸಾಮಾಜಿಕ ಅರಣ್ಯಾಧಿಕಾರಿ ಶ್ರೀ ಸುಬ್ರಹ್ಮಣ್ಯ ಆಚಾರ್, ಅವರು ಮಾತನಾಡಿ ಮರಗಳ, ತೋಟಗಳ ಮತ್ತ ಮಣ್ಣಿನ ತೇವಾಂಶ ಸಂರಕ್ಷಣೆ ಬಗ್ಗೆ ತಿಳಿಸಿಕೊಟ್ಟರು ಮತ್ತು ಇದು ದೇಶದಲ್ಲಿ ಜೀವವೈವಿದ್ಯ ಸಂರಕ್ಷಣೆಯ ಪ್ರಮುಖ ಕಾರ್ಯತಂತ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಜಾಗೃತಿ ಮೂಡಬೇಕು. ಕೇವಲ ಇವತ್ತಿನ ದಿನಕ್ಕೆ ಮಾತ್ರ ಸೀಮಿತವಾಗಿರುವುದಲ್ಲ ಎಂದು ಕಣಿಯೂರು ಗ್ರಾಮಪಂಚಾಯತ್ ಅಧ್ಯಕ್ಷ ಶ್ರೀ ಸುನಿಲ್ ಸಾಲಿಯಾನ್ ಹೇಳಿದರು.

ವೈದ್ಯಾಧಿಕಾರಿ ಡಾ:ಸಹನಾ.ಕೆ, ಗ್ರಾಮ ಪಂಚಾಯತ್ ಸದಸ್ಯ, ಶ್ರೀ ಯಶೋಧ ಶೆಟ್ಟಿ, ಗ್ರಾಮಸ್ಥರು ಭಾಗವಹಿಸಿದ್ದರು. ನಿಂಬ, ಸೀತಾಫಲ, ಜಂಜು ಇತ್ಯಾದಿ ಸಸ್ಯಗಳನ್ನು ನೆಡಲಾಯಿತು.

Comments are closed.