ಮಂಗಳೂರು: ಉಳ್ಳಾಲ ಸಮೀಪದ ಉಚ್ಛಿಲದ ಪಿಲಿಕೂರು ಮೂಲಸ್ಥಾನದ ಕಂಪ ಕುಟುಂಬಕ್ಕೆ ಹಿರಿಯರಾದ ಲಾಲ ಸಮಾಜದ ಕಣ್ಮಣಿ, ಶ್ರೇಷ್ಠ ಸಾಮಾಜಿಕ ಸಂಘಟಕ ಶ್ರೀ ಕೇಶವ ಸಂಕೊಲಿಗೆ (60) ಜೂನ್ 6 ರಂದು ವಿಧಿವಶರಾದರು.
ಇವರು ಕುಲಾಲ ಸಂಘ ಕೊಲ್ಯದ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಅನೇಕ ಹುದ್ದೆಗಳನ್ನು ಅಲಂಕರಿಸಿ ಸಮಾಜದ ಒಳಿತಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು.
ಜಾತಿಯ ಕಟ್ಟ ಕಡೆಯ ವ್ಯಕ್ತಿಗೂ ಸಂಘದ ಸೌಲಭ್ಯಗಳು ದೊರಕ ಬೇಕೆನ್ನುವ ಇಚ್ಛಾ ಶಕ್ತಿ ಯೊಂದಿಗೆ ಕೆಲಸ ಮಾಡುತ್ತಾ ಬಡವರ ದ್ವನಿಯಾಗಿದ್ದವರು. ವಿದ್ಯುತ್ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಕುಲಶೇಖರ ಶ್ರೀ ವೀರ ನಾರಾಯಣ ದೇವಸ್ಥಾನದಲ್ಲಿ ಪ್ರಾಥಮಿಕ ಸೇವಾಕರ್ತರಾದ ಶ್ರೀಯುತರು ಧಾರ್ಮಿಕ ಕ್ಷೇತ್ರದಲ್ಲೂ ಗುರುತಿಸಿಕೊಂಡವರು. ಮುಂಬಯಿ ಕುಲಾಲ ಸಂಘದ ಸದಸ್ಯರು. ಕೋಟೆಕಾರು ಭಾರತೀಯ ಜನತಾ ಪಕ್ಷದ ಹಿರಿಯ ಕಾರ್ಯಕರ್ತರಾದ ಇವರು ಪಕ್ಷದ ಗ್ರಾಮ ಸಮಿತಿಯ ಪ್ರದಾನ ಕಾರ್ಯದರ್ಶಿ ಆಗಿದ್ದರು.ಜಾತಿ ಮತ ಬೇಧವಿಲ್ಲದೆ ಎಲ್ಲರಲ್ಲೂ ಆತ್ಮಿಯರಾಗಿ ಬದುಕಿದ ಇವರು ಅಜಾತಶತ್ರುವಿನಂತಿದ್ದರು.
ಕೇಶವ ರು ಮುಂಬೈ ಕುಲಾಲ ಸಂಘದ ಗೌರವ ಪ್ರಧಾನ ಕಾರ್ಯದರ್ಶಿಯಾಗಿರುವ ಕರುಣಾಕರ ಸಾಲ್ಯಾನ್ ಸಹೋದರ, ಸಹಿತ ತಾಯಿ,ಇಬ್ಬರು ಸಹೋದರಿಯರು,ಪತ್ನಿ, ಪುತ್ರ, ಪುತ್ರಿಯನ್ನು ಮತ್ತು ಬಂದು ಮಿತ್ರರು ಹಾಗೂ ಅಪಾರ ಸಂಖ್ಯೆಯ ಅಭಿಮನಿಗಳನ್ನು ಅಗಲಿದ್ದಾರೆ.
ವಿವಿಧ ಗಣ್ಯರಿಂದ ಸಂತಾಪ :
ಕೇಶವ. ಸಂಕೊಲಿಗೆ ಯವರ ನಿದಾನಕ್ಕೆ ಮಂಗಳೂರು ಬಿಜೆಪಿ ಮಂಡಲ ಅಧ್ಯಕ್ಷರಾದ ಚಂದ್ರಹಾಸ್ ಪಂಡಿತ್, ಕೊಲ್ಯ ಕುಲಾಲ ಸಂಘದ ಅಧ್ಯಕ್ಷರು ಪ್ರವೀಣ್ ಬಸ್ತಿ ಮಾಜಿ ಅಧ್ಯಕ್ಷರು ದೇವಪ್ಪ ಮೂಲ್ಯ ಅಂಬಿಕಾ ರೋಡ್ . ಕೊಲ್ಯ ಕುಲಾಲ ಭವನ ನಿರ್ಮಾಣ ಸಮಿತಿಯ ಅಧ್ಯಕ್ಷ ಅನಿಲ್ ದಾಸ್. ಶ್ರೀ ವೀರನಾರಾಯಣ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಕುಲಾಲ್ ಕಲ್ಬಾವಿ . ಟ್ರಸ್ಟಿ ಗಿರಿಧರ್ ಮೂಲ್ಯ. ಸೇವಾ ಟ್ರಸ್ಟಿನ ಅಧ್ಯಕ್ಷ ಬಿ .ಪ್ರೇಮಾನಂದ ಕುಲಾಲ್. ವೀರನಾರಾಯಣ ಸೇವಾ ಸಮಿತಿ ಅಧ್ಯಕ್ಷ ಸುಂದರ್ ಕುಲಾಲ್ ಶಕ್ತಿನಗರ .ಹಾಗೂ ಸರ್ವಸದಸ್ಯರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ಅಧ್ಯಕ್ಷ ಕೃಷ್ಣ ಅತ್ತವರ್ . ಮಾಜಿ ಅಧ್ಯಕ್ಷ ನ್ಯಾಯವಾದಿ ಲಕ್ಷ್ಮಣ್ ಕುಂದರ್. ಕುಲಾಲ ಪ್ರತಿಷ್ಠಾನ ಮಂಗಳೂರು ಇದರ ಅಧ್ಯಕ್ಷ ಬಿ ಸುರೇಶ್ ಕುಲಾಲ್. ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ನ್ಯಾಯವಾದಿ ರವೀಂದ್ರ ಮುನ್ನಿ ಪಾಡಿ. ಮುಂಬೈ ಕುಲಾಲ ಸಂಘದ ಅಧ್ಯಕ್ಷರು ದೇವದಾಸ್ ಕುಲಾಲ್ ಮತ್ತು ಪದಾಧಿಕಾರಿಗಳು ಸರ್ವ ಸದಸ್ಯರು ಜ್ಯೋತಿ ಕೋಪರೇಟಿವ್ ಕ್ರೆಡಿಟ್ ಕಾರ್ಯಧ್ಯಕ್ಷ ಗಿರೀಶ್ ಬಿ ಸಾಲ್ಯಾನ್ ಹಾಗೂ ಆಡಳಿತ ಮಂಡಳಿ ದುಃಖ ಸಂತಾಪ ಸೂಚಿಸಿರುವರು.
ಚಿತ್ರ,ವರದಿ : ದಿನೇಶ್ ಕುಲಾಲ್ ಮುಂಬಾಯಿ
Comments are closed.