ಕರಾವಳಿ

ಕ್ವಾರೆಂಟೈನ್ ಉಲ್ಲಂಘನೆ: ಸೀಲ್ ಡೌನ್ ಆದ ಹೆಬ್ರಿ ವಸತಿಗೃಹದ ಉಸ್ತುವಾರಿ ವಿರುದ್ಧ ದೂರು

Pinterest LinkedIn Tumblr

ಉಡುಪಿ: ಎರಡು ಪಾಸಿಟಿವ್ ಕೇಸು ಬಂದ ಹಿನ್ನೆಲೆ ಸೀಲ್‌ಡೌನ್‌ ಆಗಿರುವ ಹೆಬ್ರಿ ವಸತಿಗೃಹದಲ್ಲಿ ಕ್ವಾರಂಟೈನ್‌ನಲ್ಲಿರುವವರ ಮೇಲ್ವಿಚಾರಣೆ ಮಾಡುತ್ತಿದ್ದ ಇಬ್ಬರು ನಿಯಮ ಉಲ್ಲಂಘನೆ ಮಾಡಿ ಹೊರಗಡೆ ತಿರುಗಾಡುತ್ತಿದ್ದರು ಎಂದು ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ.

ವಸತಿಗೃಹದ ಉಸ್ತುವಾರಿ ವಹಿಸಿಕೊಂಡವರು ಕೂಡ ಅದೇ ಸ್ಥಳದಲ್ಲಿ ಕ್ವಾರಂಟೈನ್‌ನಲ್ಲಿರಬೇಕಿತ್ತು. ಆದರೆ ಅವರು ನಾಡ್ಪಾಲು ಗ್ರಾಮದಲ್ಲಿರುವ ತಮ್ಮ ಮನೆಗೆ ಹೋಗಿದ್ದೂ ಅಲ್ಲದೆ ಪರಿಸರದಲ್ಲಿ ಅಡ್ಡಾಡುತ್ತಿದ್ದಾರೆ ಎಂದು ದೂರು ಬಂದಿತ್ತು. ಅವರನ್ನು ಕ್ವಾರಂಟೈನ್‌ ಮಾಡುವಂತೆ ಆರೋಗ್ಯಾಧಿಕಾರಿಗಳು ಸೂಚಿಸಿರುವ ಹಿನ್ನೆಲೆಯಲ್ಲಿ ರಾತ್ರಿ ಪೊಲೀಸ್‌ ಹಾಗೂ ದೂರುದಾರರು ಸೀತಾನದಿಗೆ ಹೋಗಿ ಪರಿಶೀಲಿಸಿದಾಗ ಆರೋಪಿತರು ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿ ಸುತ್ತಾಡುತ್ತಿರುವುದು ದೃಢವಾಗಿದೆ ಎಂದು ಮೂಲಗಳು ತಿಳಿಸಿವೆ.

Comments are closed.