ಕರಾವಳಿ

ಮಹಾತ್ಮಗಾಂಧಿ ರಾಷ್ಟ್ರಿಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ : ಅರ್ಜಿ ಆಹ್ವಾನ

Pinterest LinkedIn Tumblr

ಮಂಗಳೂರು ಮೇ 21: ಕೋವಿಡ್ -19 ಲಾಕ್ ಡೌನ್ ನಿಂದ ಸಂದಿಗ್ಧ ಪರಿಸಿತ್ಥಿಯಿಂದ ತೋಟಗಾರಿಗೆ ಬೆಳೆಗಾರರಿಗೆ ತೊಂದರೆ ಉಂಟಾಗಿದ್ದು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತೋಟಗಾರಿಗೆ ಇಲಾಖೆಯ ಮೂಲಕ ಇಂತಹ ರೈತರಿಗೆ ಅಭಿವೃದ್ಧಿಗೆ ಸರಕಾರ ಅವಕಾಶ ಕಲ್ಪಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ರೈತರು ಸದರಿ ಯೋಜನೆಯಡಿ ತೋಟಗಾರಿಗೆ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ, ನಿರ್ವಹಣೆ, ಪುನಶ್ವೇತನ, ಇಲಾಖಾ ಕ್ಷೇತ್ರಗಳಲ್ಲಿ ಅನುಮೋದಿತ ಕಾಮಗಾರಿಗಳು, ಕೃಷಿ ಹೊಂಡ ಮತ್ತು ಕೊಳವೆ ಬಾವಿ ಮರುಪೂರಣ ಘಟಕಗಳ ನಿರ್ಮಾಣ ಹಾಗೂ ಇತರೆ ಮಣ್ಣು ಮತ್ತು ನೀರು ಸಂರಕ್ಷಣೆ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಬಹುದಾಗಿದೆ.

ಆಸಕ್ತರು ಆಯಾ ತಾಲೂಕಿನ ತೋಟಗಾರಿಕೆ ಇಲಾಕೆಯ ಹಿರಿಯ ಸಹಾಯಕ ತೋಟಗಾರಿಗೆ ನಿರ್ದೇಶಕರು ಅಥವಾ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ಹೆಚ್ಚಿನ ವಿವರಗಳಿಗೆ ಸಮೀಪದ ತೋಟಗಾರಿಗೆ ಕಚೇರಿಗಳನ್ನು ಸಂಪರ್ಕಿಸಬಹುದು.

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, (ಜಿ.ಪಂ) ಮಂಗಳೂರು – 0824-2423615, ಹಿರಿಯ ಸಹಾಯಕ ತೋಟಗಾರಿಕೆ ತೋಟಗಾರಿಕ ಕಚೇರಿ, (ಜಿ.ಪಂ) ಬಂಟ್ವಾಳ – 08255-234102, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, (ಜಿ.ಪಂ) ಪುತ್ತೂರು – 08251-230905, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, (ಜಿ.ಪಂ) ಸುಳ್ಯ – 08257-232020, ಹಿರಿಯ ಸಹಾಯಕ ತೋಟಗಾರಿಕೆ ತೋಟಗಾರಿಕ ಕಚೇರಿ (ಜಿ.ಪಂ) ಬೆಳ್ತಂಗಡಿ – 08256-232148 ಇವರನ್ನು ಸಂಪರ್ಕಿಸಲು ತೋಟಗಾರಿಗೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Comments are closed.