ಕರಾವಳಿ

ದೈನಂದಿನ ಸಾಮಾಗ್ರಿಗಳ ಸರಬರಾಜು ಪ್ರಕ್ರಿಯೆಗೆ ನೋಡಲ್ ಅಧಿಕಾರಿ ನೇಮಕ: ಡಿಸಿ ಜಿ.ಜಗದೀಶ್

Pinterest LinkedIn Tumblr

ಉಡುಪಿ: ಕೋವಿಡ್-2019 (ಕೊರೋನಾ ವೈರಸ್ ಕಾಯಿಲೆ ) ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಸಿಆರ್ಪಿಸಿ ಸೆಕ್ಷನ್ 144(3) ರಂತೆ ನಿರ್ಬಂಧ ವಿಧಿಸಿ ಆದೇಶವನ್ನು ಹೊರಡಿಸಲಾಗಿದ್ದು, ಅದರಂತೆ ಜನರು ಹೊರಗಡೆ ಸಂಚಾರಿಸುವುದನ್ನು ನಿರ್ಬಂಧಿಸಲಾಗಿದೆ. ಮುಂದುವರಿದಂತೆ ಸದರಿ ನಿರ್ಬಂಧಗಳನ್ನು ಇನ್ನಷ್ಟು ಬಿಗಿಗೊಳಿಸುವ ಅವಶ್ಯಕತೆ ಕಂಡು ಬಂದ ಹಿನ್ನಲೆಯಲ್ಲಿ ಜನರಿಗೆ ಅಗತ್ಯವಿರುವ ದಿನಸಿ ಸಾಮಾಗ್ರಿಗಳು ಮತ್ತಿತರ ಅವಶ್ಯಕ ಸಾಮಾಗ್ರಿಗಳನ್ನು ನಿಗದಿತ ಸಮಯದಲ್ಲಿ ಮಾತ್ರ ಸಾಮಾಜಿಕ ಅಂತರವನ್ನು ಪಾಲಿಸಿ ಖರೀದಿಸಲು ಅವಕಾಶವನ್ನು ನೀಡಿ ಪ್ರತಿದಿನ ಬೆಳಿಗ್ಗೆ 7 ರಿಂದ 11 ರವರೆಗೆ ಸಮಯವಕಾಶವನ್ನು ನಿಗದಿಪಡಿಸಿ ಆದೇಶವನ್ನು ಹೊರಡಿಸಲಾಗಿದೆ.

ಈ ಸಂಧರ್ಭದಲ್ಲಿ ಜಿಲ್ಲೆಯ ಸಾರ್ವಜನಿಕರ ದೈನಂದಿನ ಬಳಕೆಗೆ ಅವಶ್ಯಕವಿರುವ ದಿನ ನಿತ್ಯದ ಆಹಾರ ಪದಾರ್ಥಗಳಾದ ಹಾಲು, ಪಡಿತರ ದವಸ ಧಾನ್ಯಗಳು, ಹಣ್ಣು ಮತ್ತು ತರಕಾರಿ ಹಾಗೂ ಇತರೆ ಅವಶ್ಯಕ ಸಾಮಾಗ್ರಿಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಸಾರ್ವಜನಿಕರಿಗೆ ಸಮರ್ಪಕವಾಗಿ ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಹಾಗೂ ಅಗತ್ಯ ವಸ್ತುಗಳ ದಾಸ್ತಾನು ಶೇಖರಿಸಿಕೊಂಡು ಕೃತಕ ಅಭಾವ ಸೃಷ್ಟಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲು ಮತ್ತು ದಿನನಿತ್ಯದ ಆಹಾರ ಸಾಮಾಗ್ರಿಗಳ ಪೂರೈಕೆಯ ಸಂಬಂಧ ಅಗತ್ಯ ಕ್ರಮವಹಿಸಲು , ರಾಜು .ಕೆ ಸಹಾಯಕ ಕಮೀಷನರ್ ಕುಂದಾಪುರ ಮೊ.ಸಂ.8762823984, ಭುವನೇಶ್ವರಿ ,ಉಪ ನಿರ್ದೇಶಕರು ,ತೋಟಗಾರಿಕೆ ಇಲಾಖೆ ಉಡುಪಿ ಮೊ.ಸಂ 9448999225, ಗಜೇಂದ್ರ .ವಿ ಸಹಾಯಕ ನಿಯಂತ್ರಕರು ಕಾನೂನು ಮಾಪನ ಶಾಸ್ತ್ರ ಉಡುಪಿ ಮೊ.ಸಂ. 9845154263, ಗೋಪಾಲ್ ಕಾಕನೂರ್, ಕಾರ್ಯದರ್ಶಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕಾರ್ಕಳ, ಮೊ.ಸಂ 9886925800, ಗಾಯತ್ರಿ , ಕಾರ್ಯದರ್ಶಿ , ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಉಡುಪಿ ಮೊ.ಸಂ.9900599335, ದೀಪ್ತಿ , ಕಾರ್ಯದರ್ಶಿ , ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕುಂದಾಪುರ, 9663858151 ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶಿಸಿದ್ದಾರೆ.

Comments are closed.