ಕರಾವಳಿ

ಬಡಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆದ ‘ಪೊಲ್ಯನ್ಸ್ ಫೌಂಡೇಶನ್’

Pinterest LinkedIn Tumblr

ಉಚ್ಚಿಲ: ಮಾರಣಾಂತಿಕ ಕೊರೋನಾ ವರಸ್ ಭೀತಿ ಹಿನ್ನೆಲೆಯಲ್ಲಿ ದೇಶಾದ್ಯಂತ ಸಂಪೂರ್ಣ ಲಾಕ್ ಡೌನ್ ಆಗಿದ್ದು, ಈ ಹಿನ್ನಲೆಯಲ್ಲಿ ಉಚ್ಚಿಲ ‘ಪೊಲ್ಯನ್ಸ್ ಫೌಂಡೇಶನ್’ ವತಿಯಿಂದ ಬಡವರಿಗೆ ಅಗತ್ಯವಾದ ಆಹಾರ ಸಾಮಗ್ರಿ, ದಿನ ಬಳಕೆಯ ವಸ್ತುಗಳನ್ನು ವಿತರಿಸಲಾಯಿತು.

ಉಚ್ಚಿಲ ಪೊಲ್ಯ ಪರಿಸರದ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಸಮುದಾಯದ ಒಟ್ಟು 44 ಬಡ ಕುಟುಂಬದವರಿಗೆ ಒಂದು ತಿಂಗಳಿಗಾಗುವಷ್ಟು ಅಕ್ಕಿ, ಬೇಳೆ, ಚಾ ಹುಡಿ, ಸಕ್ಕರೆ, ಮೆಣಸು, ನೀರುಳ್ಳಿ, ಉಪ್ಪು, ಎಣ್ಣೆ, ಹಾಗು ಇತರ ಆಹಾರ ಸಾಮಗ್ರಿಗಳನ್ನು ಬಡವರ ಮನೆ ಬಾಗಿಲಿಗೆ ಕೊಂಡೋಗಿ ವಿತರಿಸುವ ಮೂಲಕ ಬಡವರ ಕಷ್ಟಕ್ಕೆ ‘ಪೊಲ್ಯನ್ಸ್ ಫೌಂಡೇಶನ್’ ಸ್ಪಂದನೆ ನೀಡಿದಂತಾಗಿದೆ.

ಸಾಮಾಜಿಕ ಹಾಗು ಜನಪರ ಕಾಳಜಿಯಿಂದ ಹುಟ್ಟಿಕೊಂಡಿರುವ ‘ಪೊಲ್ಯನ್ಸ್ ಫೌಂಡೇಶನ್’ ಹಿಂದಿನಿಂದಲೂ ಪೊಲ್ಯ ಪರಿಸರದಲ್ಲಿ ಹಲವರ ಕಷ್ಟ, ಕಾರ್ಪಣ್ಯಗಳಿಗೆ ಸ್ಪಂದಿಸುವ ಜೊತೆಗೆ ಮಾನವೀಯ ಕಾಳಜಿಯನ್ನಿಟ್ಟುಕೊಂಡು ಮುಂದೆ ಸಾಗುತ್ತಿದೆ.

ಕೊರೋನಾ ಭೀತಿನಿಂದಾಗಿ ಇಡೀ ದೇಶವೇ ಲಾಕ್‍ಡೌನ್ ಆಗಿದ್ದು, ಇದರಿಂದಾಗಿ ಆಹಾರವಿಲ್ಲದೆ ಸಾಕಷ್ಟು ಜನರು ಪರದಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಜಾತಿ-ಧರ್ಮದ ಎಲ್ಲೆಮೀರಿ ಬಡವರ ಕಷ್ಟಕ್ಕೆ ಸ್ಪಂದಿಸಿರುವ ‘ಪೊಲ್ಯನ್ಸ್ ಫೌಂಡೇಶನ್’ನ ಸಾಮಾಜಿಕ ಕಾಳಜಿ, ಬದ್ಧತೆಯನ್ನು ಊರಿನ ಜನ ಕೊಂಡಾಡಿದ್ದಾರೆ.

ಆಹಾರ ಸಾಮಾಗ್ರಿಗಳ ಕಿಟ್ ವಿತರಿಸುವ ಸಂದರ್ಭದಲ್ಲಿ ‘ಪೊಲ್ಯನ್ಸ್ ಫೌಂಡೇಶನ್’ನ ಅಧ್ಯಕ್ಷ ಝಹೀರ್, ಉಪಾಧ್ಯಕ್ಷ ಮಜೀದ್, ಕಾರ್ಯದರ್ಶಿ ಶಫಿ , ಸದಸ್ಯರಾದ ವಿಲಾಸ್ ದೇವಾಡಿಗ, ಅಲ್ಫಾಜ್, ರಫಾಯಿಜ್ , ಬಿಲಾಲ್ ಮುಂತಾದವರು ಹಾಜರಿದ್ದರು.

Comments are closed.