ಕುಂದಾಪುರ: ಕೊರೋನಾ ಹರಡುವಿಕೆ ತಡೆಗಟ್ಟುವ ಹಿನ್ನೆಲೆ ಲಾಕ್ ಡೌನ್ ಆದೇಶಕ್ಕೆ ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರತಿಸ್ಪಂದನ ಸಿಕ್ಕಿದೆ.
ತಲ್ಲೂರು ಪಡಿತರ ವಿತರಣೆ ಕೇಂದ್ರದ ಬಳಿ ಜನದಟ್ಟಣೆ ಇದ್ದರೆ ಸಾಮಾಜಿಕ ಅಂತರ ಇತ್ತು. ಹೆಮ್ಮಾಡಿ, ನೆಂಪು, ವಂಡ್ಸೆ, ಚಿತ್ತೂರು, ಕಂಚಿನಕೊಡ್ಲು, ಆಲೂರು, ಹರ್ಕೂರು, ಸೇನಾಪುರ, ಮುಳ್ಳಿಕಟ್ಟೆ, ನಾಯಕವಾಡಿ, ಗುಜ್ಜಾಡಿ, ಗಂಗೊಳ್ಳಿ ಪ್ರದೇಶಗಳಲ್ಲಿ ಒಂದೆರಡು ಅಗತ್ಯ ವಸ್ತುಗಳ ಅಂಗಡಿ ಹಾಗೂ ಪಡಿತರ ಸರಬರಾಜು ಅಂಗಡಿ ಹೊರತು ಪಡಿಸಿ ಉಳಿದಂತೆ ಅಂಗಡಿ ಮುಗ್ಗಟ್ಟುಗಳು ಮುಚ್ಚಿತ್ತು. ಗ್ರಾಮೀಣ ಭಾಗದ ರಸ್ತೆಗಳಲ್ಲಿ ಜನ ಹಾಗೂ ವಾಹನ ಸಂಚಾರಗಳು ಕೇವಲ ಬೆರಳೆಣಿಕೆಗೆ ಸೀಮಿತವಾಗಿತ್ತು.ಪ್ರತಿಯೊಬ್ಬರು ಮಾಸ್ಕ್ ಹಾಕಿಕೊಳ್ಳುವ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸಾಮಾಜಿಕ ಪ್ರಜ್ಞೆ ಹಾಗೂ ನಾಗರೀಕ ಕರ್ತವ್ಯವನ್ನು ತೋರಿಸಿದ್ದಾರೆ.

ಗ್ರಾಮ ಭಾಗದಲ್ಲಿ ದಿನಸಿ ಹಾಗೂ ತರಕಾರಿ ಅಂಗಡಿಗಳಲ್ಲಿ ವಸ್ತುಗಳು ಖಾಲಿಯಾಗಿ ಮಾರಾಟ ಭರಾಟೆ ಇಲ್ಲದ್ದರಿಂದ ಅಂಗಡಿಗಳು ಮುಚ್ಚಿವೆ. ತೆರದಿರುವ ಒಂದೆರಡು ಅಂಗಡಿಗಳಲ್ಲಿ ಆಳಿದುಳಿದ ವಸ್ತು ಮಾರಾಟ ಮಾಡಲಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಬೆಳೆದ ತರಕಾರಿ, ಮರ ಗೆಣಸು, ಬಾಳೆಹಣ್ಣು, ಅಕ್ಕಿ ಹೊರತು ಪಡಿಸಿ ಉಳಿದ ಅಗತ್ಯ ವಸ್ತುಗಳ ಪೂರೈಕೆ ನಗರ ಪ್ರದೇಶದಿಂದ ಆಗಬೇಕಾಗಿದೆ. ಗೂಡ್ಸ್ ವಾಹನಗಳ ಸಂಚಾರಕ್ಕೆ ನಿರ್ಬಂಧ ಇರೋದರಿಂದಾಗಿ ಗ್ರಾಮೀಣ ಭಾಗಗಳಿಗೆ ಅಗತ್ಯ ವಸ್ತುಗಳ ಸಮರ್ಪಕ ಪೂರೈಕೆಯಾಗುತ್ತಿಲ್ಲ ಎನ್ನುವ ದೂರು ಈ ಭಾಗದಲ್ಲಿ ಇದೆ. ಬಹುತೇಕ ಮೀನು ಮಾರುಕಟ್ಟೆಗಳಲ್ಲಿ ಕರ್ಪ್ಯೂ ವಾತಾವರಣ ಇತ್ತು.
ಆಲೂರು, ಮುಳ್ಳಿಕಟ್ಟೆ, ಗಂಗೊಳ್ಳಿ, ಗುಜ್ಜಾಡಿ ಮುಂತಾದ ಕಡೆಗಳಲ್ಲಿ ಪೊಲೀಸ್ ಸಿಬ್ಬಂದಿಗಳನ್ನೊಳ್ಳಗೊಂಡ ಚೆಕ್ ಪೋಸ್ಟ್ ತೆರೆಯಲಾಗಿದೆ.
ಮಾಸ್ಕ್ ಬಳಕೆ ಬಗ್ಗೆ ಡಿಸಿ ಹೇಳಿದ್ದೇನು?
ಗ್ರಾಮೀಣ ಭಾಗದಲ್ಲಿ ಆಹಾರ ಅಭಾವ ಆಗದಂತೆ ನೋಡಿಕೊಳ್ಳಲು ಎಪಿಎಂಸಿ ಅಧ್ಯಕ್ಷರ ಜೊತೆ ಎಸಿ ಸಭೆ ನಡೆಸಿದ್ದು, ಎಪಿಎಂಸಿ ವಾಹನಗಳ ಮೂಲಕ ದಿನಸಿ ಪೂರೈಕೆಗೆ ಪರವಾನಿಗೆ ಕೂಡುತ್ತೆವೆ. ತಕ್ಷಣ ಎಪಿಎಂಸಿ ಸಿದ್ದಗೊಳ್ಳಬೇಕು. ದಿನಸಿಗೆ ತೂಂದರೆ ಆಗದ ಹಾಗೆ ನೋಡಬೇಕು. ಎಲ್ಲಾ ಕಡೆಗೂ ಮಾಸ್ಕ್ ಅಗತ್ಯ ಇಲ್ಲ. ಎಲ್ಲಿ ಯಾರಿಗಾದರೂ ಜ್ವರ ಬಂದರೆ ಕೆಮ್ಮಿದರೆ ಅಂತವರ ಸಂಪರ್ಕ ಇರುವಂತ ಸಂದರ್ಭ, ಪಬ್ಲಿಕ್‌ನಲ್ಲಿ ಜನದಟ್ಟಣೆ ಇರುವ ಕಡೆ ಮಾಸ್ಕ್ ಅಗತ್ಯ ಇದೆ. ಹೊರಗಡೆಯಿಂದ ಬಂದವರು ಮನೆಯಲ್ಲಿ ಉಳಿಯದೆ ಸುತ್ತಾಟಕ್ಕೆ ಇಳದಿರೆ ನಿರ್ದಾಕ್ಷಣ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಡಿಸಿ ಹೇಳಿದರು.
ಕಾನೂ ಉಲ್ಲಂಘನೆ ಬೇಡ…
ಕಾನೂನು ಉಲ್ಲಂಘನೆ ಮಾಡಿದರೆ ಲಾಠಿಚಾರ್ಜ್ ಅಷ್ಟೇ ಅಲ್ಲ ಒಳಗಡೆ ಇಡಲು ಸೂಚನೆ ಕೂಟ್ಟಿದ್ದಾರೆ. ಸಾರ್ವಜನಿಕರು ಅನವಶ್ಯಕವಾಗಿ ಹೊರಗಡೆ ಬರಬೇಡಿ ತುರ್ತು ಅಗತ್ಯವಿದ್ದರೆ ಮಾತ್ರ ಬನ್ನಿ ಅದನ್ನು ಬಿಟ್ಟು ದಿನ ಮೀನು,ತರಕಾರಿ ಅಂತೆಲ್ಲಾ ಬಾರದೆ, ಒಂದು ವಾರಕಾಗುವಷ್ಟು ತೆಗೆದುಕೊಂಡು ಹೋಗಿ. ಇನ್ನೂ ಅಂಗಡಿಗಳಲ್ಲಿ ಅಂತರ ಇರಲಿ.ಇದನ್ನ ಉಲ್ಲಂಘಗಿಸಿದರೆ ಅಂತ ಅಂಗಡಿ ರದ್ದು ಮಾಡುತ್ತೆವೆ. ದಿನಸಿ ದಿನಬಳಿಕೆ ವಸ್ತುಗಳ ಬೆಲೆ ಏರಿಕೆ ಮಾಡಿ ವ್ಯಾಪಾರ ಮಾಡಿದರೆ, ಪರವಾನಬಿಗೆ ರದ್ದು ಮಾಡಿ, ಅಂಗಡಿ ಬಂದ್ ಮಾಡಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ದಿನಬಳಕೆ ವಸ್ತುಗಳ ಅಭಾವ ಆಗದಂತೆ ವ್ಯವಸ್ಥೆ ಮಾಡಲಾಗುತ್ತದೆ.
Comments are closed.