ಕರಾವಳಿ

ಮಿಕ್ಸೆಡ್ ಮಾರ್ಶಲ್ ಆರ್ಟ್ಸ್ ವಿಭಾಗದಲ್ಲಿ ಮಂಗಳೂರಿನ ಧೀರಜ್‌ಗೆ ಪ್ರಥಮ ಸ್ಥಾನ

Pinterest LinkedIn Tumblr

ಮಂಗಳೂರು ; ಮುಂಬೈ ಯಲ್ಲಿ ಇತ್ತೀಚೆಗೆ ಜರುಗಿದ ಇಂಟರ್ ಕಾಲೇಜು ಸ್ಪೊರ್ಟ್ಸ್ ಫೆಸ್ಟ್ ನಲ್ಲಿ ಪಾಲ್ಗೊಂಡು ” ಮೋಯ್ ಥಾಯ್ ಚಾಂಪಿಯನ್ಷಿಪ್ ನ” ಮಿಕ್ಸೆಡ್ ಮಾರ್ಶಲ್ ಆರ್ಟ್ಸ್ ವಿಭಾಗದಲ್ಲಿ ನಗರದ ಜಪ್ಪು ಮಾರ್ಕೆಟ್ ನ ಧೀರಜ್ ಜೆ. ಪ್ರಥಮ ಸ್ಥಾನ ಪಡೆದಿದ್ದಾರೆ.

ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ Bsc , PEM, ವಿದ್ಯಾರ್ಥಿಯಾಗಿರುವ ಈತ ಮಂಕಿ ಮೋಯಥಾಯ್ ಫಿಟ್ನೆಸ್ ಕ್ಲಬ್, ಮಂಗಳೂರು ಇದರ ಸದಸ್ಯರಾಗಿರುವರು. ಇವರು ಜಪ್ಪುಮಾರ್ಕೆಟ್ ನಿವಾಸಿ ದಾಮೋದರ ಮತ್ತು ಅನಿತಾ ದಂಪತಿಗಳ ಪುತ್ರ.

Comments are closed.