ಕರಾವಳಿ

ಜನಗಣತಿ – ಸಾರ್ವಜನಿಕರು ನಿಖರ ಮಾಹಿತಿ ನೀಡಿ ಅಧಿಕಾರಿಗಳಿಗೆ ಸಹಕರಿಸಿ ; ಜಿಲ್ಲಾಧಿಕಾರಿ

Pinterest LinkedIn Tumblr

ಮಂಗಳೂರು ; ಜನಗಣತಿಗೆ ನಿಯೋಜಗೊಂಡಿರುವ ಅಧಿಕಾರಿಗಳು ಮಾಹಿತಿಯನ್ನು ಸಂಗ್ರಹಣೆ ಮಾಡುವ ಸಂಧರ್ಭದಲ್ಲಿ ಯಾವುದೇ ಲೋಪಕ್ಕೆ ಆಸ್ಪದ ನೀಡದಂತೆ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಹೇಳಿದರು.

ನಗರದ ಬೆಸೆಂಟ್ ಡಿಗ್ರಿ ಕಾಲೇಜಿನಲ್ಲಿ ನಡೆದ ಜನಗಣತಿ-2021 ಕ್ಷೇತ್ರ ತರಬೇತುದಾರರ ತರಬೇತಿ ಕಾರ್ಯಾಗಾರ ವನ್ನು ಉದ್ಘಾಟಿಸಿ ಮಾತನಾಡಿದರು.

ಜನಗಣತಿ, ದೇಶದಲ್ಲಿ ಜನಸಾಮಾನ್ಯರ ಸಮಗ್ರ ಮಾಹಿತಿಯನ್ನು ಸಂಗ್ರಹಿಸುವ ಪ್ರಮುಖ ಕಾರ್ಯವಾಗಿದೆ. ಪ್ರಸುತ್ತ 16ನೇ ಜನಗಣತಿಯಾಗಿದ್ದು, ಅಧಿಕಾರಿಗಳು ಜನಗಣತಿ ಸಂಧರ್ಭದಲ್ಲಿ ಮನೆಗೆ ಬಂದಾಗ ಸಾರ್ವಜನಿಕರು ನಿಖರವಾದ ಮಾಹಿತಿ ನೀಡಿ ಸಹಕಾರ ನೀಡಬೇಕು. ಜನಗಣತಿ ಸಂದರ್ಭದಲ್ಲಿ ಪಡೆದ ಮಾಹಿತಿ ಗೌಪ್ಯವಾಗಿ ಇಡಲಾಗುವುದು. ಈ ಜನಗಣತಿಯಲ್ಲಿ ಒಟ್ಟು 34 ಪ್ರಶ್ನೆಗಳು ಒಳಗೊಂಡಿದ್ದು, ಜನಗಣತಿಯು ಜಿಲ್ಲೆಯಲ್ಲಿ ಏಪ್ರಿಲ್ 15 ರಿಂದ ಮೇ 29 ನಡೆಯಲಿದೆ.

ತರಬೇತಿ ಕಾರ್ಯಾಗಾರದಲ್ಲಿ ತರಬೇತುದಾರರು ನೀಡುವ ಮಾಹಿತಿಯನ್ನು ಅರ್ಥ ಮಾಡಿಕೊಳ್ಳುವ ಜೊತೆಗೆ ಯಾವುದೇ ಸಂದೇಹ ಬಂದಲ್ಲಿ ಮೇಲ್ವಿಚಾರಕರಿಂದ ಮಾಹಿತಿಯನ್ಬು ಪಡೆದುಕೊಳ್ಳಬೇಕು. ಅಧಿಕಾರಿಗಳು ಮಾಹಿತಿ ಸಂಪೂರ್ಣವಾಗಿ ಪಡೆಯಬೇಕು. ಜಿಲ್ಲೆಯಲ್ಲಿ ಅಂದಾಜು 4100 ಗಣತಿದಾರರು, 500 ಮೇಲ್ವಿಚಾರಕರು, 114 ಕ್ಷೇತ್ರ ತರಬೇತುದಾರರ, 28 ಚಾರ್ಜ್ ಅಧಿಕಾರಿಗಳು ನೇಮಕ ಮಾಡಿಕೊಳ್ಳಲಾಗಿದೆ ಎಂದರು.

ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ಎಮ್.ಜೆ ರೂಪಾ, ಜಿಲ್ಲಾ ಸಹಾಯಕ ಸಂಖ್ಯಿಕ ಅಧಿಕಾರಿ ಉದಯ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರದೀಪ್ ಡಿಸೋಜಾ, ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದರು.

Comments are closed.