
ನಂತರ ಎರಡು ದೊಡ್ಡ ಚಮಚ ಜೀರಿಗೆ ತೆಗೆದುಕೊಳ್ಳಿ ಈ ಜೀರಿಗೆಯಲ್ಲಿ ಕೊಬ್ಬನ್ನು ಕರಗಿಸುವ ಅಂಶಗಳು ಜಾಸ್ತಿನೇ ಇವೆ ಹಾಗೇನೇ ಇದು ಮೆಟಬಾಯಲಿಸಮ್ ನ್ನು ಇದು ಹೆಚ್ಚಿಸುತ್ತದೆ ಜೀರಿಗೆ ನಾವು ಸೇವಿಸಿದ ಆಹಾರವನ್ನು ಕೊಬ್ಬನ್ನು ಹಾಗೂ ಸಕ್ಕರೆಯನ್ನು ಕಾರ್ಬೋಹೈಡ್ರೇಟ್ ಗಳನ್ನು ಕೂಡ ಇದು ಒಡೆಯಲು ತುಂಬಾನೇ ಉಪಯೋಗವಿದೆ ಕರುಳನ್ನು ಸಹ ಇದು ಆರೋಗ್ಯವಾಗಿ ಇರಿಸುತ್ತದೆ ನಂತರ ಸೋಂಪುಕಾಳು ಅಥವಾ ಬಡೆಸೋಪು ಇದನ್ನು ಸೇವಿಸುವುದರಿಂದ ಸೇವಿಸಿದ ಆಹಾರದಲ್ಲಿ ಇರುವಂತಹ ವಿಟಮಿನ್ಸ್ ಖನಿಜಗಳು ನಮ್ಮ ದೇಹವು ಹೀರಿಕೊಳ್ಳಲು ಸಹಕಾರಿಯಾಗಿದೆ. ರಕ್ತ ಸಂಚಾರ ಹೆಚ್ಚಾಗುತ್ತದೆ ಆಮ್ಲಜನಕವು ಎಲ್ಲ ಅಂಗಗಳಿಗೆ ಪೂರೈಸಿ ಎಲ್ಲ ಅಂಗಗಳು ಸರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ ಇದನ್ನು ಎರಡು ಚಮಚ ತೆಗೆದುಕೊಳ್ಳಿ ನಂತರ ಅಜವೈನ್ ಓಂ ಕಾಳು ಎರಡು ಚಮಚ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.
ದೇಹಕ್ಕೆ ಅಗತ್ಯವಿರುವ ಕೊಬ್ಬನ್ನು ಇರಿಸಿ ಉಳಿದಿದ್ದನ್ನು ತೆಗೆದುಹಾಕುತ್ತವೆ. ನಂತರ ಒಂದುವರೆ ಇಂಚು ದಾಲ್ಚಿನ್ನಿ ಅಥವಾ ಚೆಕ್ಕೆ ಒಳಾಂಗಗಳಲ್ಲಿ ಇರುವ ಕೊಬ್ಬನ್ನು ಕಡಿಮೆ ಮಾಡುತ್ತದೆ ಇವೆಲ್ಲವನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಹುರಿದುಕೊಳ್ಳಿ ಇದನ್ನು ತಣ್ಣಗಾದ ಮೇಲೆ ಮೀಕ್ಸಿಗೆ ಹಾಕಿ ಸಣ್ಣಗೆ ಪುಡಿ ಮಾಡಿಕೊಳ್ಳಿ ಇದನ್ನು ಒಂದು ಲೋಟದಲ್ಲಿ ತುಂಬಾ ಬಿಸಿ ಇರುವ ನೀರನ್ನು ತೆಗೆದುಕೊಳ್ಳಿ ಈ ನೀರಿಗೆ ಒಂದು ಚಮಚ ಪುಡಿ ಹಾಕಿ ಮಿಶ್ರಣ ಮಾಡಿ ನೀರು ಆರುವವರೆಗೆ ಹಾಗೆ ಇಡೀ ನಂತರ ಅರ್ಧ ನಿಂಬೆಹಣ್ಣು ಸೇರಿಸಿ ಮಿಶ್ರಣ ಮಾಡಿ ಇದನ್ನು ನೀವು ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಬೆಳಿಗ್ಗೆ ಸೇವಿಸಿ ಹೀಗೆ ಮಾಡುವುದರಿಂದ ಒಂದು ತಿಂಗಳಲ್ಲಿ ನಿಮಗೆ ಗೊತ್ತಾಗುತ್ತದೆ ನಿಮ್ಮ ಹೊಟ್ಟೆ ಬೊಜ್ಜು ಖಂಡಿತ ಕರಗುತ್ತದೆ. ಈ ಪುಡಿಯನ್ನು ನೀವು ಬೇಕಾದರೆ ಜಾಸ್ತಿ ಮಾಡಿ ಒಂದು ಡಬ್ಬದಲ್ಲಿ ಶೇಖರಿಸಿ ಇಟ್ಟು ಕೊಳ್ಳಬಹುದು 15 ದಿನದವರೆಗೂ ಒಮ್ಮೆ ಮಾಡಿದ ಪುಡಿಯನ್ನು ಉಪಯೋಗಿಸಬಹುದು. ಜೊತೆಗೆ ವ್ಯಾಯಾಮ ಮಾಡಿ ಸ್ವಲ್ಪ ನಡೆದಾಡಿ.
Comments are closed.