ಕರಾವಳಿ

ಮತ್ಸ್ಯ ಕ್ಷಾಮ: ಸಾಧಾರಣ ಗಾತ್ರದ ಒಂದು ಬಂಗಡೆ ಮೀನು 100 ರೂ.!

Pinterest LinkedIn Tumblr


ಕಾರವಾರ: ನಿರಂತರ ಮತ್ಸ್ಯ ಕ್ಷಾಮದ ಪರಿಣಾಮ ಮೀನಿನ ದರ ಗಣನೀಯ ಪ್ರಣಾಣದಲ್ಲಿ ಏರಿಕೆ ಕಂಡಿದ್ದು, ಕಾರವಾರ ಮೀನು ಮಾರುಕಟ್ಟೆಯಲ್ಲಿ ಶುಕ್ರವಾರ ಸಾಧಾರಣ ಗಾತ್ರದ ಒಂದು ಬಂಗಡೆ ಮೀನು 100 ರೂ.ಗೆ ಮಾರಾಟವಾಗಿದೆ.

ಪಾಪ್ಲೆಟ್ 500 ರೂ.ಗೆ ಒಂದು ಸಿಗುತ್ತಿದೆ. 10 ರಿಂದ 12 ಮೀನುಗಳ ಒಂದು ಪಾಲಿಗೆ (ರಾಶಿ) 70 ರಿಂದ 80 ರೂ. ಇದ್ದ ತಾರ್ಲೆ, ಬೆಳ್ಳಂಜೆ, ಲೆಪ್ಪೆ, ಮುಂತಾದ ಮೀನುಗಳ ಬೆಲೆ 100 ರೂ.ಗೆ ಏರಿಕೆಯಾಗಿದೆ. ಹಿಂದೆಂದೂ ಕಾಣದ ರೀತಿಯಲ್ಲಿ ಮತ್ಸ್ಯ ಕ್ಷಾಮ ಈ ಬಾರಿ ಮೀನುಗಾರರನ್ನು ಬಾಧಿಸುತ್ತಿದೆ. ಸುಮಾರು 1 ತಿಂಗಳಿಂದ ಉಂಟಾದ ಈ ಕ್ಷಾಮದಿಂದ ದೋಣಿಗಳು ಸಮುದ್ರಕ್ಕಿಳಿದರೂ ಡೀಸೆಲ್ ಹಾಗೂ ಕಾರ್ವಿುಕರ ಖರ್ಚು ಹುಟ್ಟುತ್ತಿಲ್ಲ. ಇದರಿಂದ ಬಹುತೇಕ ಟ್ರಾಲರ್ ಬೋಟ್​ಗಳು ದಡದಲ್ಲೇ ಲಂಗರು ಹಾಕಿವೆ. ಆಳ ಸಮುದ್ರಲ್ಲೇ ಹೆಚ್ಚಾಗಿ ಸಿಗುವ ಬಾಂಗಡೆ, ಪಾಪ್ಲೆಟ್​ನಂಥ ದೊಡ್ಡ ಮೀನುಗಳಿಗೆ ಬರ ಉಂಟಾಗಿದ್ದು, ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಬಂದಿದೆ.

ಶುಕ್ರವಾರ ಬೈತಖೋಲ್ ಬಂದರಿನಲ್ಲಿ ಮೀನುಗಾರಿಕೆಗೆ ಇಳಿದ 1 ಬೋಟ್​ನಲ್ಲಿ ಮಾತ್ರ ಬಂಗಡೆ ಮೀನು ಸಿಕ್ಕಿತ್ತು. ಇದರಿಂದ 34 ಕೆಜಿ ತೂಗುವ ಒಂದು ಬುಟ್ಟಿ ಮೀನು 8500 ರೂ.ಗೆ ಮಾರಾಟವಾಯಿತು.

Comments are closed.