ಕರಾವಳಿ

ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಇಂದು ಮಂಗಳೂರಿಗೆ.. .

Pinterest LinkedIn Tumblr

ಮಂಗಳೂರು ಜನವರಿ 15 : ಚಾಮರಾಜನಗರ ಜಿಲ್ಲಾ ಉಸ್ತುವಾರಿ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಸುರೇಶ್ ಕುಮಾರ್ ಅವರ ದ.ಕ ಜಿಲ್ಲಾ ಪ್ರವಾಸ ಇಂತಿವೆ.

ಫೆಬ್ರವರಿ 15 ರಂದು ಬೆಳಿಗ್ಗೆ 8.50 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ, ಬೆಳಿಗ್ಗೆ 9.30 ಗಂಟೆಗೆ ಮಂಗಳಜ್ಯೋತಿ ಇಂಟರ್‍ನ್ಯಾಷನಲ್ ಶಾಲೆಗೆ ಭೇಟಿ ನೀಡಲಿದ್ದಾರೆ. 11.50 ಗಂಟೆಗೆ ಪದ್ಮಶ್ರೀ ಪುರಸ್ಕøತ ಹರೇಕಳ ಹಾಜಬ್ಬ ಶಾಲೆಗೆ ಭೇಟಿ ನೀಡಲಿದ್ದಾರೆ.

2 ಗಂಟೆಗೆ ಸರಕಾರಿ ಅತಿಥಿ ಗೃಹದಲ್ಲಿ ವಾಸ್ತವ್ಯ. ಮಧ್ಯಾಹ್ನ 3.30ಗಂಟೆಗೆ ನಿಟ್ಟೆ ವಿದ್ಯಾಸಂಸ್ಥೆಯ ನ್ಯೂ ಎಜುಕೇಷನ್ ಬ್ಲಾಕ್ ಉದ್ಘಾಟನೆ ಮತ್ತು ಶಾಲಾ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸುವರು.

ಸಂಜೆ 6 ಗಂಟೆಗೆ ಸರ್ಕಾರಿ ಅತಿಥಿಗೃಹದಲ್ಲಿ ಪಿಯುಸಿ ಮತ್ತು ಪ್ರೌಢ ಶಾಲಾ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಿರುವರು. ರಾತ್ರಿ 8.40 ಗಂಟೆಗೆ ವಿಮಾನದ ಮೂಲಕ ಕೇಂದ್ರ ಸ್ಥಾನಕ್ಕೆ ತೆರಳಲಿದ್ದಾರೆ.

Comments are closed.