ಕರಾವಳಿ

1.50 ಲಕ್ಷದ ಬ್ರಾಸ್ಲೆಟ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಚಾಲಕ

Pinterest LinkedIn Tumblr

ಉಡುಪಿ: ಮ್ಯಾಕ್ಸಿ ಕ್ಯಾಬ್‌ ನಲ್ಲಿ ಬಿಟ್ಟುಹೋದ ಸುಮಾರು 1.50 ಲಕ್ಷ ರೂ. ಮೌಲ್ಯದ ಬ್ರಾಸ್ಲೆಟ್‌ ಒಂದನ್ನು ಮ್ಯಾಕ್ಸಿ ಕ್ಯಾಬ್‌ ಚಾಲಕ ಪೊಲೀಸರ ಸಮ್ಮುಖದಲ್ಲಿ ವಾರಿಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಜೋಡುರಸ್ತೆ ನಿವಾಸಿ ಲಿಯೋ ಫೆರ್ನಾಂಡಿಸ್‌ ಚಿನ್ನಾಭರಣ ಹಿಂದಿರುಗಿಸಿದ ಮ್ಯಾಕ್ಸಿ ಕ್ಯಾಬ್‌ ಚಾಲಕ. ಫೆ. 9ರಂದು ಸಂಜೆ ವೇಳೆ ಕಾರ್ಕಳ ನಕ್ರೆಯಿಂದ ಅಲಂಗಾರ್‌ ಗೆ ಮದುವೆ ದಿಬ್ಬಣ ಹೋಗಿ ವಾಪಸಾಗುವ ಸಂದರ್ಭ ನಕ್ರೆಯ ವಿಲ್ಸನ್‌ ಡಿಸೋಜ ಎನ್ನುವರು ಬ್ರಾಸ್ಲೆಟ್‌ ಕಳೆದುಕೊಂಡಿದ್ದರು. ಮಾರನೇ ದಿನ ಮ್ಯಾಕ್ಸಿ ಕ್ಯಾಬ್‌ ನಲ್ಲಿ ಚಿನ್ನದ ಆಭರಣವಿರುವುದನ್ನು ಕಂಡು ಚಾಲಕ ಲಿಯೋ ಫೆರ್ನಾಂಡಿಸ್‌ ಚಿನ್ನ ಕಳೆದುಕೊಂಡವರಿಗೆ ಮಾಹಿತಿ ನೀಡಿದರು. ಬಳಿಕ ಬ್ರೆಸ್ಲೆಟ್‌ ಅನ್ನು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ವಾರಿಸುದಾರರಿಗೆ ಹಸ್ತಾಂತರಿಸಿದರು.

ಕಾರ್ಕಳ ನಗರ ಠಾಣೆಯ ಪಿಎಸ್‌ಐ ಮಧು, ಆಟೋರಿಕ್ಷಾ ಚಾಲಕರ ಸಂಘಗಳ ಒಕ್ಕೂಟದ ಕಾರ್ಯಾಧ್ಯಕ್ಷ ಸಂತೋಷ್‌ ರಾವ್‌, ತಾಲೂಕು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ದೀಪಕ್‌ ಹೆಗಡೆ, ಕಾರ್ಯದರ್ಶಿ ಅಣ್ಣಿ ಮಡಿವಾಳ, ಟ್ಯಾಕ್ಸಿ ಚಾಲಕ ಗಣೇಶ್‌ ಮತ್ತಿತರರು ಈ ಸಂದರ್ಭದಲ್ಲಿದ್ದರು.

Comments are closed.