ಕರಾವಳಿ

ಸಿಗರೇಟ್ ಚಟದಿಂದ ಮನೆಬಿಟ್ಟ ಗೋವಾ ಮೂಲದ ಬಾಲಕನ ರಕ್ಷಣೆ

Pinterest LinkedIn Tumblr

ಉಡುಪಿ: ಉಡುಪಿ ರೈಲ್ವೆ ರಕ್ಷಣಾ ದಳದ ಪೊಲೀಸರು, ಕೇರಳದಿಂದ ಗೋವಾ ಕಡೆಗೆ ಹೋಗುವ ರೈಲಿನಲ್ಲಿ ಟಿಕೇಟು ಪಡೆಯದೇ ಪ್ರಯಾಣಿಸುತ್ತಿದ್ದ ಗೋವಾ ಮೂಲದ 16 ವರ್ಷ ಪ್ರಾಯದ ಬಾಲಕನನ್ನು ವಿಚಾರಿಸಿದಾಗ, ಮನೆಯಲ್ಲಿ ಹೇಳದೆ ಬಂದಿದ್ದು ತಿಳಿದು ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿರುತ್ತಾರೆ.

ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಭೇಟಿ ನೀಡಿ ವಿಚಾರಿಸಿದಾಗ ವಿಪರೀತ ಸಿಗರೇಟ್ ಸೇವನೆ ಚಟ ಇರುವ ಬಗ್ಗೆ ತಿಳಿದುಬಂದಿದ್ದು, ಪೋಷಕರ ಬಗ್ಗೆ ಮಾಹಿತಿ ಪಡೆದು ಬಾಲಕನನ್ನು ಹೆಚ್ಚಿನ ಆಪ್ತ ಸಮಾಲೋಚನೆ ಮತ್ತು ಚಿಕಿತ್ಸೆಗಾಗಿ ಬಾಳಿಗಾ ಆಸ್ಪತ್ರೆ ಉಡುಪಿಯಲ್ಲಿ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಆರ್.ಪಿ.ಏಫ್. ಇನ್ಸ್‍ಪೆಕ್ಟರ್ ಸಂತೋಷ ಗಾವ್ನ್ಕರ್, ಮೊಹಮ್ಮದ್, ಮಕ್ಕಳ ಸಹಾಯವಾಣಿಯ ತ್ರಿವೇಣಿ, ವೃಷಕ್ ಭಾಗವಹಿಸಿದ್ದರು.

Comments are closed.