ಕರಾವಳಿ

5 ವರ್ಷಗಳಿಂದ ಸರಕಾರದಿಂದ ವಾಹನ ಚಾಲಕರ ಖಾಯಂ ನೇಮಕಾತಿ ಆಗಿಲ್ಲ : ಬಿ. ವಿಶ್ವನಾಥ್ ಶೆಟ್ಟಿ

Pinterest LinkedIn Tumblr

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ವಾಹನ ಚಾಲಕರ ಕೇಂದ್ರ ಸಂಘ (ರಿ.) ಮಂಗಳೂರು ಇದರ ವಾರ್ಷಿಕ ಮಹಾಸಭೆ, ನಿವೃತ್ತ ವಾಹನ ಚಾಲಕರಿಗೆ ಸನ್ಮಾನ ಹಾಗೂ ನಿವೇಶನ ಸಮಿತಿಯ ಸಭೆ ಜಂಟಿಯಾಗಿ ಸಂಘದ ಕಚೇರಿಯಲ್ಲಿ ಫೆಬ್ರವರಿ 2ರಂದು ಸಂಘದ ಅಧ್ಯಕ್ಷ ಅರುಣ್‍ಕಾಂತ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದ ಮಾಜಿ ಅಧ್ಯಕ್ಷ ಬಿ. ವಿಶ್ವನಾಥ್ ಶೆಟ್ಟಿ ಮಾತನಾಡಿ, ಕಳೆದ 15 ವರ್ಷಗಳಿಂದ ಸರಕಾರದಿಂದ ವಾಹನ ಚಾಲಕರ ಖಾಯಂ ನೇಮಕಾತಿ ಆಗಿಲ್ಲ. ಈ ನಿಟ್ಟಿನಲ್ಲಿ ನಿವೃತ್ತ ವಾಹನ ಚಾಲಕರೇ ಸಂಘದ ಆಧಾರಸ್ತಂಭಗಳು ಆಗಬೇಕು. ಹಾಲಿ ಮತ್ತು ಮಾಜಿ ಚಾಲಕರು ಸೇರಿ ಸಂಘವನ್ನು ಪ್ರಬಲವಾಗಿ ಸಮರ್ಥವಾಗಿ ಮುನ್ನಡೆಸಬೇಕು ಎಂದು ಹೇಳಿದರು.

ಸಂಘದ ಅಧ್ಯಕ್ಷ ಅರುಣ್‍ಕಾಂತ ಮಾತನಾಡಿ, ಸರ್ವ ಸದಸ್ಯರ ಸಹಕಾರ ಸಂಘಕ್ಕೆ ಸದಾ ಇರಲಿ ಎಂದು ವಿನಂತಿಸಿದರು.

ಸಭೆಯಲ್ಲಿ ವರದಿ ವರ್ಷದಲ್ಲಿ ಸರಕಾರಿ ವಾಹನ ಚಾಲಕರ ಸೇವೆಯಿಂದ ವಯೋ ನಿವೃತ್ತಿ ಹೊಂದಿದ, ರಾಷ್ಟ್ರೀಯ ಹೆದ್ದಾರಿ ಉಪವಿಭಾಗ ಅಶೋಕನಗರ ಮಂಗಳೂರಿನಲ್ಲಿ 30 ವರ್ಷ ಸೇವೆ ಸಲ್ಲಿಸಿದ ಪುರುಷೋತ್ತಮ ಪೂಜಾರಿ ಹಾಗೂ 27 ವರ್ಷ ಅಬಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಡಿ.ಜಿ. ಪ್ರಾನ್ಸಿಸ್ ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿದರು.

ವೇದಿಕೆಯಲ್ಲಿ ಸಂಘದ ವರದಿಯನ್ನು ಕಾರ್ಯದರ್ಶಿ ಬಾಲಕೃಷ್ಣ ಕೆ., ಲೆಕ್ಕ ಪತ್ರವನ್ನು ಖಜಾಂಚಿಯವರ ಪರವಾಗಿ ಪಾಲ್ ಡಿ ಸೋಜಾ ಮಂಡಿಸಿ ಸರ್ವಾನುಮತ ಅನುಮೋದನೆ ಪಡೆದರು.

ಕಾರ್ಯಕ್ರಮದಲ್ಲಿ ನಿವೇಶನ ಸಮಿತಿಯ ಅಧ್ಯಕ್ಷ ರಾಬರ್ಟ್ ಪಾೈಸ್ , ಸಂಘದ ಮಾಜಿ ಅಧ್ಯಕ್ಷ ಅಜೀವ ಸದಸ್ಯ ಬಿ. ವಿಶ್ವನಾಥ್ ಶೆಟ್ಟಿ, ಉಪಾಧ್ಯಕ್ಷ ಸಂಜೀವ, ಬಂಟ್ವಾಳ ಸಮಿತಿಯ ವೇಣುಗೋಪಾಲ ಕಾಮತ್, ನಿವೇಶನ ಸಮಿತಿಯ ಪುಟ್ಟಣ್ಣ, ಸುಳ್ಯದ ಯೋಗೀಶ್ ಗೌಡ, ಖಜಾಂಚಿ ಮಾಧವ್ ಕೆ. ಮುಂತಾದವರು ಉಪಸ್ಥಿತರಿದ್ದರು.

ಗೌರವ ಕಾರ್ಯದರ್ಶಿ ಪುರುಷೋತ್ತಮ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಎಸ್ ಪುರುಷೋತ್ತಮ ವಂದಿಸಿದರು. ಬಿ. ಮನಮೋಹನ್ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು.

Comments are closed.