ಉಡುಪಿ: ಮಲ್ಪೆ ಬೀಚ್ ನಂತೆ ಜಿಲ್ಲೆಯ ಇತರೆ ಬೀಚ್ ಗಳನ್ನು ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಿ, ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಮೂಲಕ, ಜಿಲ್ಲೆಯ ಪ್ರವಾಸೋದ್ಯಮವನು ಇನ್ನಷ್ಟು ಅಭಿವೃದಿಗೊಳಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ. ಅವರು ಶನಿವಾರ, ಮಲ್ಪೆ ಬೀಚ್ ನಲ್ಲಿ, ಜಿಲ್ಲಾಡಳಿತ ಉಡುಪಿ, ಮಲ್ಪೆ ಅಭಿವೃದ್ದಿ ಸಮಿತಿ, ಪ್ರವಾಸೋಧ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ನಗರಸಭೆ, ಯುವ ಸಬಲೀಖರಣ ಮತ್ತು ಕ್ರೀಡಾ ಇಲಖೆ, ನಿರ್ಮಿತಿ ಕೆಂದ್ರ, ಪಶುಪಾಲನ ಇಲಖೆ, ಕರಾವಳಿ ಪ್ರವಾಸೋಧ್ಯಮ ಸಂಘಟನೆ ಹಾಗೂ ಸ್ಥಳೀಯ ಭಜನಾ ಮಂದಿರಗಳ ಸಹಯೋಗದಲ್ಲಿ ಶನಿವಾರ ಮತ್ತು ಭಾನುವಾರ 2 ದಿನಗಳ ಕಾಲ ನಡೆಯುವ ಮಲ್ಪೆ ಬೀಚ್ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಲ್ಪೆ ಬೀಚ್ ಈಗಾಗಲೇ ಅಭಿವೃದಿಗೊಂಡಿದ್ದು, ಇದನ್ನು ಸೀ ವಾಕ್ ಪ್ರದೇಶದವರೆಗೆ ಅಭಿವೃದ್ದಿಗೊಳಿಸಲಾಗುವುದು ಅಲ್ಲದೇ ಕದಿಕೆ ಬೀಚ್ ಮತ್ತು ಬೆಂಗ್ರೆ ಬೀಚ್ ಗಳನ್ನೂ ಸಹ ಅಭಿವೃಧಿಗೊಳಿಸುವ ಉದ್ದೇಶವಿದ್ದು, ಬೀಚ್ ಗಳಲ್ಲಿ ಶುಚಿತ್ವ ಮತ್ತು ಮೂಲ ಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು, ಪಡುಕರೆ ಬೀಚ್ ನಲ್ಲಿ 3 ಹೈಮಾಸ್ಟ್ ಲೈಟ್ ಅಳವಡಿಸಲು ಈಗಾಗಲೇ ಸೂಚನೆ ನೀಢಿದ್ದು, ಸ್ಥಳೀಯರ ಸಹಕರದಿಂದ ಪಡುಕರೆಯಲ್ಲಿ ಏಕ ರೂಪದ ಹೋಂ ಸ್ಟೇಗಳನ್ನು ನಿರ್ಮಣ ಮಾಡಿ ಪ್ರವಾಸಿಗರನ್ನು ಆಕರ್ಷಿಸುವುದರ ಜೊತೆಗೆ ಸ್ಥಳಿಯರಿಗೆ ಉದ್ಯೋಗವಕಾಶಗಳ ಸೃಷ್ಟಿಯೂ ಸಾಧ್ಯವಾಗಲಿದೆ, ಪಡುಕರೆಯಲ್ಲಿ ಮರೀನಾ ನಿರ್ಮಾಣ ಕುರಿತಂತೆ , ಸ್ಥಳಿಯ ಮೀನುಗಾರರ ಆಭಿಪ್ರಾಯ ಸಂಗ್ರಹಿಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸಲಾಗುವುದು , ಮರೀನಾ ನಿರ್ಮಾಣ ಕುರಿತ ಡಿಪಿಆರ್ ತಯಾರಿಸಲು 1 ಕೋಟಿ ವೆಚ್ಚವಾಗಲಿದ್ದು , ಮರೀನಾ ನಿರ್ಮಾಣವಾದಲ್ಲಿ ಇಲ್ಲಿನ ಆರ್ಥಿಕ ಪರಿಸ್ಥಿತಿ ಬದಲಾಗಲಿದ್ದು, ಉದ್ಯೋಗವಕಾಶಗಳು ಹೆಚ್ಚಲಿದೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದರು. ಜಿಲ್ಲೆಯಲ್ಲಿ ಪ್ರವಾಸೋಧ್ಯಮ ಅಭಿವೃಧಿಗಾಗಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿದ್ದು, ಈ ಮೂಲಕ ಪ್ರವಾಸೋದ್ಯಮ ಚಟುವಟಿಕೆಗಳನ್ನು ವಿಸ್ತರಿಸಲಾಗುತ್ತಿದೆ, ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿದ್ದು, ಸ್ಥಳೀಯರ ಸಹಕಾರ ಅತ್ಯಗತ್ಯ ಎಂದು ರಘುಪತಿಭಟ್ ತಿಳಿಸಿದರು.
ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೊಸ ಆಯಾಯ ನೀಡುವ ನಿಟ್ಟಿನಲ್ಲಿ ವಿಷನ್ ಡಾಕ್ಯುಮೆಂಟ್ ಸಿದ್ದಪಡಿಸಲಾಗುತ್ತಿದ್ದು, ಈ ಬಗ್ಗೆ ಈಗಾಗಲೇ ಸರ್ವೇ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲಿ ಮುಗಿಯಲಿದೆ, ಪಡುಬಿದ್ರೆಯಲ್ಲಿ ಭ್ಲೂ ಪ್ಲಾಗ್ ಕಾಮಗಾರಿಗಳು ಮಾಚ್ ್ ಅಂತ್ಯಕ್ಕೆ ಮುಗಿಯಲಿದ್ದು, ಈ ವರ್ಷಕ್ಕೆ ಸರ್ಟಿಫಿಕೇಟ್ ದೊರೆಯಲಿದೆ, ಭ್ಲೂ ಫ್ಲಾಗ್ ನಿಯಮಗಳಿಗನುಗುಣವಾಗಿಯೇ ಜಿಲ್ಲೆಯ ಇತರೇ ಬೀಛ್ ಗಳನ್ನು ಅಭಿವೃಧ್ದಿಪಡಿಸಲು ಪ್ರಯತ್ನಗಳು ನಡೆದಿವೆ, ಮರವಂತೆ ಮತ್ತು ಸೋಮೇಶ್ವರ ಬೀಚ್ ಅಭಿವೃಧಿಗೆ ಈಗಾಗಲೇ ತಲಾ 5 ಕೋಟಿ ಬಿಡುಗಡೆಯಗಿದೆ, ಮುರುಡೇಶ್ವರ ಮಾದರಿಯಲ್ಲಿ ಸೋಮೇಶ್ವರ ಬೀಚ್ ಅಭಿವೃಧಿಗೊಳಿಸಲು ಸುಮಾರು 50 ಕೋಟಿ ರೂ ಗಳನ್ನು ಬಜೆಟ್ ನಲ್ಲಿ ಮೀಸಲಿಡಲು ಸಂಸದ ರಾಘವೆಂದ್ರ ಅವರಲ್ಲಿ ಕೋರಲಾಗಿದೆ, ಕೊಲ್ಲೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಅಧಿಕವಾಗುತ್ತಿದ್ದು, ಕೊಲ್ಲೂರಿನಲ್ಲಿ ಯುಜಿಡಿ ಮತ್ತು ನೀರಿನ ಸಂಪರ್ಕ ಕಾಮಗಾರಿಗಳು ಒಂದು ತಿಂಗಳಲ್ಲಿ ಮುಗಿಯಲಿದ್ದು, ಸ್ವಚ್ಛ ಕೊಲ್ಲೂರು ಯೋಜನೆ ಮೂಲಕ ಕೊಲ್ಲೂರಿಗೆ ಹೊಸ ರೂಪ ನೀಡಲು ಪ್ರಯತ್ನಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು,ಕ ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ ಪೂಜಾರಿ, ದ.ಕ ಮತ್ತು ಉಡುಪಿ ಜಿಲ್ಲಾ ಮೀನಿಗಾರಿಕಾ ಫೆಡರೇಷನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ನಗರಸಭಾ ಸದಸ್ಯೆ ಎಡ್ಲಿನ್ ಕರ್ಕಡ, ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹಲೋತ್, ಕರಾವಳಿ ಕವಲು ಪಡೆ ಎಸ್ಪಿ ಚೇತನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಮದಾಪುರ ಉಪ ವಿಭಾಗಾಧಿಕಾರಿ ರಾಜು, ಪೌರಾಯುಕ್ತ ಆನಂಧ್ ಕಲ್ಲೋಳಿಕರ್, ಎಸಿಟಿ ಯ ಮನೋಹರ ಶೆಟ್ಟಿ, , ಕನ್ನಡ ಮತ್ತು ಸಂಸ್ಕ್ರತಿ ಇಲಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ನಿರ್ಮಿತಿ ಕೆಂಧ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಉಪಸ್ಥಿತರಿದ್ದರು.
ಪ್ರವಾಸೋದ್ಯಮ ಇಲಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ ನಾಯಕ್ ಸ್ವಾಗತಿಸಿದರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿ, ವಂದಿಸಿದರು. ಬೀಚ್ ಉತ್ಸವದ ಅಂಗವಾಗಿ ಭಾನುವಾರ , ಪುರುಷರಿಗಾಗಿ ವಾಲಿಬಾಲ್ ಮತ್ತು ಮಹಿಳೆಯರಿಗಾಗಿ ಥ್ರೋಬಾಲ್ ಸ್ಪರ್ದೇ, ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ದೇ, ಮರಳು ಶಿಲ್ಪ ಸ್ಪರ್ದೇ, ಗಾಳಿಪಟ ಪ್ರದರ್ಶನ, ಶ್ವಾನ ಪ್ರದರ್ಶನನ, ವೈನ್ ಮೇಳ ಮತ್ತು ಆಹಾರ ಮೇಳ ಹಾಗೂ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿವೆ.
Comments are closed.