ಕರಾವಳಿ

ಕಟೀಲು ಬ್ರಹ್ಮಕಲಶೋತ್ಸವ :ಮಣ್ಣಗುಡ್ಡ 28ನೇ ವಾರ್ಡಿನ ಭಕ್ತಾದಿಗಳಿಂದ ಹೊರೆಕಾಣಿಕೆ

Pinterest LinkedIn Tumblr

ಮಂಗಳೂರು : ಕಟೀಲು ಬ್ರಹ್ಮಕಲಶೋತ್ಸವಕ್ಕೆ ಮಣ್ಣಗುಡ್ಡ 28ನೇ ವಾರ್ಡಿನ ಭಕ್ತಾದಿಗಳ ವತಿಯಿಂದ ಹೊರೆಕಾಣಿಕೆ ಮೆರವಣಿಗೆ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದ ಅಜಿತ್ ಕುಮಾರ್ ಹೆಗ್ಡೆ ಮಂಗಳೂರಿನ ಮಣ್ಣಗುಡ್ಡೆ ಗುರ್ಜಿ ಜಂಕ್ಷನ್ ನಲ್ಲಿ ಚಾಲನೆ ನೀಡಿದರು.

ಮಣ್ಣಗುಡ್ಡೆಯ ಮ ನ ಪಾ ಕಾರ್ಪೊರೇಟರ್ ಶ್ರೀಮತಿ ಸಂದ್ಯಾ ಮೋಹನ್ , ಬಿ ಜೆ ಪಿ ಮಂಗಳೂರು ದಕ್ಷಿಣ ಕ್ಷೇತ್ರದ ಉಪಾಧ್ಯಕ್ಷ ಬಿ ಮೋಹನ್, ಬಿ ಜೆ ಪಿ ಮಣ್ಣಗುಡ್ಡೆಯ ಪ್ರಧಾನ ಕಾರ್ಯದರ್ಶಿ ಮಹೇಶ್ ಕುಂದರ್ ಹಾಗು ಬಿ ಜೆ ಪಿಯ ಗುರುಚರಣ್ ಎಚ್. ಆರ್ , ಸುರೇಂದ್ರ ಶ್ರೀಯಾನ್, ಶ್ರೀರಾಂ ಪೈ, ಕೆ. ಶ್ರೀಧರ ಆಚಾರ್ಯ, ಶ್ರೀಮತಿ ರೇಖಾ ಶ್ರೀಧರ್, ಶ್ರೀಮತಿ ಹರ್ಷಿತ ಚೇತನ್ ಕುಂದರ್, ಪವನ್ ಕುಮಾರ್, ವಿನಾಯಕ್ ಶಿವು ದೇಶಕೊಡಿ, ಎಂ. ನಾರಾಯಣ್ ಭಟ್ , ರವಿ ಬೋಳೂರ್, ಸತೀಶ್ ಬಾಯಾರ್ ಮುಂತಾದವರು ಉಪಸ್ಥಿತರಿದ್ದರು

Comments are closed.